Karnataka legislative Assembly Session Live: ವಿಧಾನಸಭೆ ಅಧಿವೇಶನ; ಮಧ್ಯಾಹ್ನದ ಕಲಾಪ ಆರಂಭ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 16, 2024 | 3:06 PM

ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣ್ಯರಿಗೆ ಸಂತಾಪ ಸೂಸಚಿಸಿದರು. ಅಧಿವೇಶನ ಮೊದಲ ದಿನದಂದಲೇ ಎರಡೂ ಮನೆಗಳಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸದ್ದು ಮಾಡಿತು. ಇಂದು ಕೂಡ ಇದೇ ವಿಚಾರವಾಗಿ ಚರ್ಚಿಸಲು ಬಿಜೆಪಿ ನಿರ್ಧರಿಸಿದೆ.

ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣ್ಯರಿಗೆ ಸಂತಾಪ ಸೂಸಚಿಸಿದರು. ಅಧಿವೇಶನ ಮೊದಲ ದಿನದಂದಲೇ ಎರಡೂ ಮನೆಗಳಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸದ್ದು ಮಾಡಿತು. ವಿಪಕ್ಷಗಳು ಆಡಳಿತಾರೂಢ ಕಾಂಗ್ರೆಸ್​ ಸರ್ಕಾರದ ಮೇಲೆ ಮುಗಿಬಿದ್ದವು. ಎರಡನೇ ದಿನದ ಅಧಿವೇಶನ ಆರಂಭವಾಗಿದೆ. ಇಂದು ಕೂಡ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಪ್ರಸ್ತಾಪಿಸಲು ವಿಪಕ್ಷಗಳು ನಿರ್ಧಿಸಿವೆ. ಇಂದು ಸದನದಲ್ಲಿ ವಾಲ್ಮೀಕಿ ನಿಗಮ ಹಗರಣ ಬಗ್ಗೆ ಚರ್ಚಿಸಲು ಬಿಜೆಪಿ ತೀರ್ಮಾನಿಸಿದೆ. ಪ್ರಶ್ನೋತ್ತರ ಕಲಾಪದ ಬಳಿಕ ಚರ್ಚೆ ಮುಂದುವರಿಯಲಿದೆ. ವಿಪಕ್ಷ ನಾಯಕ ಆರ್.ಅಶೋಕ್ ನಿಲುವಳಿ ಮೇಲೆ ಚರ್ಚೆ ಮಾಡಲಿದ್ದಾರೆ. ಅಶೋಕ್ ಮಾತಿನ ಬಳಿಕ ಚರ್ಚೆಯಲ್ಲಿ ಉಳಿದ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ದಿನದ ಕಲಾಪ ಕೊನೆಗೊಳ್ಳುವವರೆಗೂ ಚರ್ಚೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 16, 2024 10:14 AM