ಉತ್ತರಾಖಂಡದ ಹಿಮಪಾತದಲ್ಲಿ ಇನ್ನೂ 3 ಶವಗಳು ಪತ್ತೆ

Updated on: Mar 02, 2025 | 5:00 PM

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಭೀಕರ ಹಿಮಪಾತ ಸಂಭವಿಸಿದ್ದು, ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಶಿಬಿರ ಸಮಾಧಿಯಾಗಿದೆ. ಈ ಹಿಮಪಾತದಲ್ಲಿ ಹಲವಾರು ಕಾರ್ಮಿಕರು ಹಿಮದ ಕೆಳಗೆ ಸಿಲುಕಿದ್ದಾರೆ. ಮಾನಾ ಗ್ರಾಮದಲ್ಲಿ ಹಿಮಪಾತ ಪೀಡಿತ ಸ್ಥಳದಿಂದ ಕನಿಷ್ಠ 50 ಕಾರ್ಮಿಕರನ್ನು ರಕ್ಷಿಸಲಾಯಿತು. ಆದರೆ ಅವರಲ್ಲಿ ನಾಲ್ವರು ಗಾಯಗೊಂಡು ಸಾವನ್ನಪ್ಪಿದರು.

ಚಮೋಲಿ (ಮಾರ್ಚ್ 2): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಭಾರೀ ಹಿಮಪಾತ ಸಂಭವಿಸಿದ ನಂತರ ಇಂದು 3 ಶವಗಳು ಪತ್ತೆಯಾಗಿವೆ. ಒಬ್ಬ ಕಾರ್ಮಿಕ ಇನ್ನೂ ಕಾಣೆಯಾಗಿದ್ದಾನೆ ಎಂದು ಭಾರತೀಯ ಸೇನೆ ತಿಳಿಸಿದೆ. ಈ ಘಟನೆಯಿಂದ ಸಾವಿನ ಸಂಖ್ಯೆ 7ಕ್ಕೆ ಏರಿದೆ. ಹಿಮಪಾತ ಸಂಭವಿಸಿದಾಗ ಸ್ಥಳದಲ್ಲಿ 54 ಕಾರ್ಮಿಕರಿದ್ದರು. ಇದೀಗ ಹಿಮಪಾತದಲ್ಲಿ ಸಿಲುಕಿರುವ ಕೊನೆಯ ವ್ಯಕ್ತಿಗಾಗಿ ಸೇನೆಯಿಂದ ಹುಡುಕಾಟ ನಡೆಸಲಾಗುತ್ತಿದೆ. ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಯುಎಸ್‌ಡಿಎಂಎ) ಪ್ರಕಾರ, ಐವರು ಕಾರ್ಮಿಕರು ಈ ಹಿಂದೆ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರಲ್ಲಿ ಒಬ್ಬರಾದ ಹಿಮಾಚಲ ಪ್ರದೇಶದ ಕಾಂಗ್ರಾದ ಸುನಿಲ್ ಕುಮಾರ್ ತಾನಾಗಿಯೇ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More