ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ: 3 ಖಾಸಗಿ ಸೈಬರ್ ಸೆಂಟರ್ ಸೀಜ್
ಸೈಬರ್ ಕೇಂದ್ರಗಳಲ್ಲಿ ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಮಾನ್ವಿಯಲ್ಲಿ 3 ಸೈಬರ್ ಕೇಂದ್ರಗಳ ಮೇಲೆ ತಹಶೀಲ್ದಾರ್ ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ಮಾಡಿ ಸೀಜ್ ಮಾಡಲಾಗಿದೆ.
ರಾಯಚೂರು, ಜುಲೈ 24: ಸೈಬರ್ ಕೇಂದ್ರಗಳಲ್ಲಿ ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಕೆ ಮಾಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಮಾನ್ವಿಯಲ್ಲಿ 3 ಸೈಬರ್ ಕೇಂದ್ರಗಳ ಮೇಲೆ ತಹಶೀಲ್ದಾರ್ ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ಮಾಡಿ ಸೀಜ್ ಮಾಡಲಾಗಿದೆ. ಸರ್ಕಾರಿ ಐಡಿ ಪಡೆದು ಅಕ್ರಮವಾಗಿ ಅರ್ಜಿ ಸಲ್ಲಿಕೆಗಾಗಿ ರೂ. 250ರಿಂದ ರೂ. 350 ರೂ. ವಸೂಲಿ ಮಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಅಕ್ರಮ ಎಸಗಿಸುವುದು ಖಚಿತವಾದ ನಂತರ 3 ಸೈಬರ್ ಕೇಂದ್ರಗಳನ್ನು ಸೀಜ್ ಮಾಡಲಾಗಿದ್ದು, ಈ ಕುರಿತು ಮಾನ್ವಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.