ಚಿಕ್ಕಮಗಳೂರು: ಮಂಗಳೂರಿನಿಂದ ಬಂದ 340 ಕೆಜಿ ತೂಕದ ಸಮುದ್ರ ಮೀನು; 1 ಕೆಜಿಗೆ ಸಾವಿರ ಕೊಡ್ತಿವಿ ಅಂದ್ರು ಸಿಗ್ತಿಲ್ಲ ಅಂಬೂರು ಫಿಶ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2023 | 7:39 PM

ಚಿಕ್ಕಮಗಳೂರು ನಗರದ ಖಾಸಗಿ ಮೀನು ಅಂಗಡಿಗೆ ಮಂಗಳೂರಿನಿಂದ 340 ಕೆ.ಜಿ ತೂಕದ ಬೃಹತ್ ಸಮುದ್ರ ಮೀನು ಬಂದಿದೆ. ಭಾರೀ ಗಾತ್ರದ ಮೀನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದು, ಇದಕ್ಕೆ ಅಂಬೂರು ಮೀನು ಎಂದು ಕರೆಯಲಾಗುತ್ತದಯಂತೆ.

ಚಿಕ್ಕಮಗಳೂರು, ಆ.20: ಮಂಗಳೂರಿನಿಂದ 340 ಕೆ.ಜಿ ತೂಕದ ಬೃಹತ್ ಸಮುದ್ರ ಮೀನು, ಚಿಕ್ಕಮಗಳೂರು (Chikkamagalur) ನಗರದ ಖಾಸಗಿ ಮೀನು ಅಂಗಡಿಗೆ ಬಂದಿದೆ. ಭಾರೀ ಗಾತ್ರದ ಮೀನು(Fish) ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದು, ಇದಕ್ಕೆ ಅಂಬೂರು ಮೀನು ಎಂದು ಕರೆಯಲಾಗುತ್ತದಯಂತೆ. ಈ ಬೃಹತ್​ ಮೀನು ಖರೀದಿ ಮಾಡಲು ಗ್ರಾಹಕರು ಮುಗಿಬಿದ್ದಾರೆ. ಆದರೆ, ದುರಾದೃಷ್ಟವಶಾತ್​1 ಕೆಜಿ 1000 ಕೊಡ್ತಿವಿ ಅಂದರೂ ಅಂಬೂರು ಫಿಶ್ ಸಿಗುತ್ತಿಲ್ಲ. ಇನ್ನು ಸೌದಿ ಅರೇಬಿಯಾದಲ್ಲಿ ಈ ಮೀನಿಗೆ ಹೆಚ್ಚು ಬೇಡಿಕೆಯಿದ್ದು, ಮೊದಲ ಬಾರಿಗೆ ಖಾಸಗಿ ಮೀನು ಅಂಗಡಿ ಮಾಲೀಕ ಬೃಹತ್ ಗಾತ್ರದ ಅಂಬೂರು ಮೀನು ತರಿಸಿದ್ದರು. ಈ ವೇಳೆ ಗ್ರಾಹಕರ ಉತ್ಸಾಹ ನೋಡಿ ಮಾಲೀಕ ಮೀನಿನ ದರ ಹೆಚ್ಚಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ