Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿ: ಜನರಲ್ ತಿಮ್ಮಯ್ಯ ವೃತಕ್ಕೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್, ನೆಲಕ್ಕುರುಳಿದ ಸೇನಾನಿ ಪ್ರತಿಮೆ

ಮಡಿಕೇರಿ: ಜನರಲ್ ತಿಮ್ಮಯ್ಯ ವೃತಕ್ಕೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್, ನೆಲಕ್ಕುರುಳಿದ ಸೇನಾನಿ ಪ್ರತಿಮೆ

Gopal AS
| Updated By: ರಮೇಶ್ ಬಿ. ಜವಳಗೇರಾ

Updated on: Aug 21, 2023 | 7:57 AM

ಮಡಿಕೇರಿ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಕೆಎಸ್​ಆರ್​ಟಿಸಿ ಬಸ್​ವೊಂದು ಜನರಲ್ ತಿಮ್ಮಯ್ಯ ವೃತಕ್ಕೆ ಗುದ್ದಿದೆ. ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ಸೇನಾನಿ ತಿಮ್ಮಯ್ಯ ಪ್ರತಿಮೆ ನೆಲಕ್ಕುರುಳಿ ಬಿದ್ದಿದೆ.

ಕೊಡಗು, (ಆಗಸ್ಟ್ 21): ಮಡಿಕೇರಿ(madikeri) ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಕೆಎಸ್​ಆರ್​ಟಿಸಿ ಬಸ್​ವೊಂದು ಜನರಲ್ ತಿಮ್ಮಯ್ಯ ವೃತಕ್ಕೆ ಗುದ್ದಿದೆ. ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ಸೇನಾನಿ ತಿಮ್ಮಯ್ಯ ಪ್ರತಿಮೆ(General Thimmaiah statue) ನೆಲಕ್ಕುರುಳಿ ಬಿದ್ದಿದೆ. ಮಡಿಕೇರಿ ಡಿಪ್ಪೊದಿಂದ ಬಸ್ ಸ್ಟ್ಯಾಂಡ್ ಗೆ ಹೊರಟ್ಟಿದ್ದ ಬಸ್ ಪಿಕಪ್ ವಾಹನ ಅಪಘಾತ ತಪ್ಪಿಸಲು ಹೋಗಿ ತಿಮ್ಮಯ್ಯ ಮೂರ್ತಿಗೆ ಗುದ್ದಿದೆ. ಘಟನೆಯಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಹಾನಿಯಾಗಿದ್ದು, ಬಸ್​ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಬಸ್​ ಚಾಲಕ ಕೊಟ್ರೇಶ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ