ವಿಧಾನಸೌಧಕ್ಕೆ ಎಂಟ್ರಿಕೊಟ್ಟ ಹಾವು, ಸಿಬ್ಬಂದಿಗಳು ಶಾಕ್​! ವಿಡಿಯೋ ಇಲ್ಲಿದೆ

ವಿಧಾನಸೌಧದ(Vidhana Soudha) ಮೆಟ್ಟಿಲುಗಳ ಮೇಲೆ ಹಾವು (Snake) ಕಾಣಿಸಿಕೊಂಡಿದೆ. ಹೌದು, ಪಶ್ಚಿಮ ದ್ವಾರದ ಮೆಟ್ಟಿಲುಗಳ ಮೇಲೆ ಹಾವು ಬಂದಿತ್ತು. ಬಳಿಕ ಅಲ್ಲಿಯೇ ಇದ್ದ, ರಂಧ್ರದೊಳಗೆ ಸೇರಿಕೊಂಡ ಘಟನೆ ನಡೆದಿದೆ.

ವಿಧಾನಸೌಧಕ್ಕೆ ಎಂಟ್ರಿಕೊಟ್ಟ ಹಾವು, ಸಿಬ್ಬಂದಿಗಳು ಶಾಕ್​! ವಿಡಿಯೋ ಇಲ್ಲಿದೆ
ವಿಧಾನಸೌಧಕ್ಕೆ ಎಂಟ್ರಿ ಕೊಟ್ಟ ಹಾವು
Follow us
ಕಿರಣ್​ ಹನಿಯಡ್ಕ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2023 | 7:11 PM

ಬೆಂಗಳೂರು, ಆ.20: ವಿಧಾನಸೌಧದ (Vidhana Soudha) ಮೆಟ್ಟಿಲುಗಳ ಮೇಲೆ ಹಾವು (Snake) ಕಾಣಿಸಿಕೊಂಡಿದೆ. ಹೌದು, ಪಶ್ಚಿಮ ದ್ವಾರದ ಮೆಟ್ಟಿಲುಗಳ ಮೇಲೆ ಹಾವು ಬಂದಿತ್ತು. ಬಳಿಕ ಅಲ್ಲಿಯೇ ಇದ್ದ, ರಂಧ್ರದೊಳಗೆ ಸೇರಿಕೊಂಡ ಘಟನೆ ನಡೆದಿದೆ. ಇನ್ನು ಇತ್ತೀಚೆಗೆ ವಿಧಾನಸಭೆ ಅಧಿವೇಶನದ ನಡೆಯುತ್ತಿದ್ದ ಸಂದರ್ಭದಲ್ಲಿ, ವಿಧಾನಸೌಧದ ಸರ್ಕಾರದ ಮಹತ್ವದ ಹಳೆಯ ದಾಖಲೆಗಳಿರುವ ಕೊಠಡಿಗೆ ಹಾವೊಂದು ಎಂಟ್ರಿ ಕೊಟ್ಟಿತ್ತು. ಆ ಹಾವನ್ನು ನೋಡುತ್ತಿದ್ದಂತೆ ಪತ್ರಗಾರ ಇಲಾಖೆ ಸಿಬ್ಬಂದಿಗಳು ಆತಂಕಗೊಂಡು, ಕೂಡಲೇ ಉರಗ ರಕ್ಷಕರನ್ನು ವಿಧಾನಸೌಧದ ಸಿಬ್ಬಂದಿಗಳು ಕರೆಸಿ ಹಾವು ಹಿಡಿಸಿದ್ದರು. ಇದೀಗ ಮತ್ತೊಮ್ಮೆ ಹಾವು ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ