5G Plan Recharge: ಉಚಿತ 5G ಆಫರ್ ಪ್ಲ್ಯಾನ್ ಮುಗಿದರೆ ರೀಚಾರ್ಜ್ ದುಬಾರಿಯಾಗಲಿದೆ!
5G ನೆಟ್ವರ್ಕ್ಗೆ ಜನರನ್ನು ಸೆಳೆಯಲು ಕಂಪನಿಗಳು ಹಲವು ಕಸರತ್ತು ನಡೆಸಿವೆ. ನಂತರದಲ್ಲಿ ಉಚಿತ ಅನ್ಲಿಮಿಟೆಡ್ 5G ಆಫರ್ ಅನ್ನು ನೀಡಿವೆ, ಅಂದರೆ, ಜನರು 5G ನೆಟ್ವರ್ಕ್ನಲ್ಲಿದ್ದರೆ, ಡೇಟಾ ಪ್ಯಾಕ್ ಮಿತಿಯಿಲ್ಲದೇ ಬೇಕಾದಷ್ಟು 5G ಬಳಸಲು ಅನುವು ಮಾಡಿಕೊಟ್ಟಿವೆ. ಇದರಿಂದಾಗಿ ಜನರು ಖುಷಿಯಾಗಿದ್ದಾರೆ.
ಈಗ ಎಲ್ಲೆಡೆ 5G ದುನಿಯಾ.. 5G ಟೆಕ್ನಾಲಜಿಯ ಕ್ರಾಂತಿ ಮತ್ತು ನೆಟ್ವರ್ಕ್ ಲಭ್ಯತೆ, ಸುಲಭ ದರದಲ್ಲಿ ದೊರೆಯುವ ಸ್ಮಾರ್ಟ್ಫೋನ್ಗಳು, ಹೀಗೆ ಹತ್ತು ಹಲವು ವಿಶೇಷತೆಗಳಿಂದಾಗಿ ಜನರು 5G ಪ್ರಯೋಜನ ಪಡೆಯುತ್ತಿದ್ದಾರೆ. 5G ನೆಟ್ವರ್ಕ್ ವೇಗಕ್ಕೆ ಜನರು ಮಾರುಹೋಗಿದ್ದಾರೆ. ಆದರೆ 5G ಬಳಸುತ್ತಿರುವ ಜನರಿಗೆ ಟೆಲಿಕಾಂ ಕಂಪನಿ ಶಾಕ್ ಕೊಡಲು ಮುಂದಾಗಿದೆ. ಆರಂಭದಲ್ಲಿ 5G ನೆಟ್ವರ್ಕ್ಗೆ ಜನರನ್ನು ಸೆಳೆಯಲು ಕಂಪನಿಗಳು ಹಲವು ಕಸರತ್ತು ನಡೆಸಿವೆ. ನಂತರದಲ್ಲಿ ಉಚಿತ ಅನ್ಲಿಮಿಟೆಡ್ 5G ಆಫರ್ ಅನ್ನು ನೀಡಿವೆ, ಅಂದರೆ, ಜನರು 5G ನೆಟ್ವರ್ಕ್ನಲ್ಲಿದ್ದರೆ, ಡೇಟಾ ಪ್ಯಾಕ್ ಮಿತಿಯಿಲ್ಲದೇ ಬೇಕಾದಷ್ಟು 5G ಬಳಸಲು ಅನುವು ಮಾಡಿಕೊಟ್ಟಿವೆ. ಇದರಿಂದಾಗಿ ಜನರು ಖುಷಿಯಾಗಿದ್ದಾರೆ.