‘ಸಂತು-ಪಂತು’ ಸಿನಿಮಾ ಬಗ್ಗೆ ತುಕಾಲಿ ಸಂತೋಷ್ ಏನ್ ಹೇಳ್ತಾರೆ ಕೇಳಿ..
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಮೂಲಕ ಭಾರಿ ಜನಪ್ರಿಯತೆ ಪಡೆದಿರುವ ತುಕಾಲಿ ಸಂತೋಷ್ ಅವರು ಈಗ ಅನೇಕ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಕೆಟಿಎಂ’ ಸಿನಿಮಾದಲ್ಲಿ ಅವರು ನಟಿಸಿದ್ದು, ಆ ಚಿತ್ರದ ಪ್ರಮೋಷನ್ನಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ‘ಸಂತು-ಪಂತು’ ಚಿತ್ರದ ಕುರಿತು ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಹಾಸ್ಯ ನಟ ತುಕಾಲಿ ಸಂತೋಷ್ ಮತ್ತು ‘ಹಳ್ಳಿಕಾರ್ ಒಡೆಯ’ ಎನಿಸಿಕೊಂಡ ವರ್ತೂರು ಸಂತೋಷ್ (Varthur Santhosh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಬಹಳ ಕ್ಲೋಸ್ ಆಗಿದ್ದರು. ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಮೇಲೂ ಅವರಿಬ್ಬರ ನಡುವಿನ ಸ್ನೇಹ ಮುಂದುವರಿದಿದೆ. ಬಿಗ್ ಬಾಸ್ (Bigg Boss Kannada) ಶೋ ಪೂರ್ಣಗೊಂಡ ತಕ್ಷಣ ತುಕಾಲಿ ಸಂತೋಷ್ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ‘ಗಿಚ್ಚಿ ಗಿಲಿಗಿಲಿ ಸೀಸನ್ 3’ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ (Tukali Santhosh) ಜೊತೆಯಾಗಿ ಒಂದು ಸಿನಿಮಾ ಮಾಡಲಿದ್ದಾರೆ. ಆ ಚಿತ್ರದ ಶೀರ್ಷಿಕೆ ‘ಸಂತು-ಪಂತು’. ಆ ಬಗ್ಗೆ ತುಕಾಲಿ ಸಂತೋಷ್ ಅವರು ಮಾತನಾಡಿದ್ದಾರೆ. ‘ಕೆಟಿಎಂ’ ಸಿನಿಮಾದ ಪ್ರಮೋಷನ್ ವೇಳೆ ಅವರು ಮಾತಿಗೆ ಸಿಕ್ಕಿದ್ದಾರೆ. ‘ಸಂತು-ಪಂತು ಸಿನಿಮಾ ಸಿಕ್ಕಾಪಟ್ಟೆ ಕ್ಯೂರಿಯಾಟಿಸಿ ಮೂಡಿಸಿದೆ. ಅನೇಕ ಸ್ಕ್ರಿಪ್ಟ್ಗಳು ಬರುತ್ತಿವೆ. ನಾವು ಕಥೆ ಕೇಳುತ್ತಿದ್ದೇವೆ. ನಿರ್ಮಾಪಕರು ರೆಡಿಯಾಗಿದ್ದಾರೆ. ವರ್ತೂರು ಸಂತೋಷ್ ಅವರ ಬಿಡುವಿನ ಸಮಯವನ್ನು ನೋಡಿಕೊಂಡು ಅವರಿಗೆ ಕಥೆ ಹೇಳಬೇಕು’ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.