ಮೇಕಪ್ ಮಾಡಿಕೊಂಡು ಹೊಸ ಅವತಾರದಲ್ಲಿ ಪ್ರತಾಪ್ ಎಂಟ್ರಿ; ತುಕಾಲಿ ಸಂತೋಷ್ ಕಂಗಾಲು
ಬಿಗ್ ಬಾಸ್ ಫಿನಾಲೆಯಲ್ಲಿ ರನ್ನರ್ಅಪ್ ಆದ ಡ್ರೋನ್ ಪ್ರತಾಪ್ ಅವರು ಕರ್ನಾಟಕದಲ್ಲಿ ಫುಲ್ ಫೇಮಸ್ ಆಗಿದ್ದಾರೆ. ಆ ಶೋ ಮುಗಿದ ಕೂಡಲೇ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರತಾಪ್ ಅವರು ಈಗ ಬದಲಾಗಿದ್ದಾರೆ. ಮೇಕಪ್ ಹಚ್ಚಿಕೊಂಡು ಮಿಂಚುತ್ತಿದ್ದಾರೆ. ಅವರ ಬದಲಾದ ಗೆಟಪ್ ನೋಡಿ ತುಕಾಲಿ ಸಂತೋಷ್ ಅವರಿಗೆ ಅಚ್ಚರಿ ಆಗಿದೆ.
ಇತ್ತೀಚೆಗೆ ಮುಕ್ತಾಯವಾದ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಶೋ ಮೂಲಕ ಡ್ರೋನ್ ಪ್ರತಾಪ್ ಅವರ ಜನಪ್ರಿಯತೆ ಹೆಚ್ಚಾಗಿದೆ. ಮೊದಲೆಲ್ಲ ಡ್ರೋನ್ ಕುರಿತಾದ ವಿವಾದದಿಂದ ಸುದ್ದಿ ಆಗುತ್ತಿದ್ದ ಅವರು ಬಿಗ್ ಬಾಸ್ ಶೋಗೆ ಬಂದ ಬಳಿಕ ಬೇರೆಯದೇ ಇಮೇಜ್ ಪಡೆದುಕೊಂಡರು. ಅವರೊಳಗೆ ಓರ್ವ ಕಲಾವಿದ ಇದ್ದಾನೆ ಎಂದು ಅನೇಕರು ಹೇಳಿದ್ದುಂಟು. ಈಗ ಡ್ರೋನ್ ಪ್ರತಾಪ್ (Drone Prathap) ನಿಜಕ್ಕೂ ಕಲಾವಿದ ಆಗಿದ್ದಾರೆ! ಝಗಮಗಿಸುವ ವೇದಿಕೆಯ ಮೇಲೆ ಅವರು ಹೆಜ್ಜೆ ಹಾಕಿದ್ದಾರೆ. ‘ಗಿಚ್ಚಿ ಗಿಲಿಗಿಲಿ ಸೀಸನ್ 3’ ಕಾರ್ಯಕ್ರಮದಲ್ಲಿ ಅವರು ಡ್ಯಾನ್ಸ್ ಮಾಡಿದ್ದಾರೆ. ಅವರ ಹೊಸ ಅವತಾರ ನೋಡಿ ತುಕಾಲಿ ಸಂತೋಷ್ (Tukali Santhosh) ಕಂಗಾಲಾಗಿದ್ದಾರೆ.
ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ರನ್ನರ್ಅಪ್ ಆಗಿ ಹೊರಹೊಮ್ಮಿದರು. ಕೂಡಲೇ ಅವರಿಗೆ ‘ಗಿಚ್ಚಿ ಗಿಲಿ ಗಿಲಿ’ ಶೋನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ದೊಡ್ಮನೆಯಲ್ಲಿ ಸಿಂಪಲ್ ಆಗಿ ಇರುತ್ತಿದ್ದ ಪ್ರತಾಪ್ ಅವರು ಈಗ ಮೇಕಪ್ ಹಚ್ಚಿಕೊಂಡು ಮಿಂಚಲು ಶುರು ಮಾಡಿದ್ದಾರೆ. ಅವರ ಗೆಟಪ್ ಬದಲಾಗಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ತುಕಾಲಿ ಸಂತೋಷ್ ಅವರು ಅಚ್ಚರಿಯಿಂದ ನೋಡಿದ್ದಾರೆ.
ಇದನ್ನೂ ಓದಿ: ಡ್ರೋನ್ ಪ್ರತಾಪ್ಗೆ ಸಿನಿಮಾ-ಧಾರಾವಾಹಿ ಆಫರ್ಗಳು ಬಂದಿವೆಯೇ? ಒಪ್ಪಿಕೊಂಡಿದ್ದಾರಾ?
ಒಂದು ಕಾಲದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅವರಿಗೂ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಾಗಿದೆ. ಬಿಗ್ ಬಾಸ್ ಫಿನಾಲೆಯಲ್ಲಿ ಅವರಿಗೆ 2 ಕೋಟಿಗೂ ಅಧಿಕ ವೋಟ್ಸ್ ಬಂದಿದ್ದವು. ಪ್ರತಾಪ್ ಅವರಿಗೆ ಎಷ್ಟು ಜನ ಬೆಂಬಲ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ. ಈಗ ‘ಗಿಚ್ಚಿ ಗಿಲಿಗಿಲಿ ಸೀಸನ್ 3’ ಕಾರ್ಯಕ್ರಮದಿಂದ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ.
‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡ ‘ಗಿಚ್ಚಿ ಗಿಲಿಗಿಲಿ 3’ ಕಾರ್ಯಕ್ರಮದ ಪ್ರೋಮೋ:
View this post on Instagram
‘ಗಿಚ್ಚಿ ಗಿಲಿಗಿಲಿ 3’ ಕಾರ್ಯಕ್ರಮದ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಇದನ್ನು ನೋಡಿ ನೆಟ್ಟಿಗರು ಪ್ರತಾಪ್ ಅವರ ಡ್ಯಾನ್ಸ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಶೋನ ನಿರ್ಣಾಯಕರಾಗಿ ಶ್ರುತಿ, ಸಾಧು ಕೋಕಿಲ, ಕೋಮಲ್ ಇರಲಿದ್ದಾರೆ. ನಿರಂಜನ್ ಅವರಿಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ. ಶನಿವಾರ (ಫೆಬ್ರವರಿ 3) ಅದ್ದೂರಿಯಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಮಂಜು ಪಾವಗಡ ಕೂಡ ಈ ಕಾರ್ಯಕ್ರದಲ್ಲಿ ಮನರಂಜನೆ ನೀಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ