ಮೈಸೂರು: 8 ಮೂಟೆಯಷ್ಟು ಶುಂಠಿ ಕಟಾವು ಮಾಡಿ ಕಳ್ಳತನ

| Updated By: ವಿವೇಕ ಬಿರಾದಾರ

Updated on: Jul 30, 2023 | 10:41 AM

ಜಮೀನಿನಲ್ಲಿ ಬೆಳದಿದ್ದ ಶುಂಠಿಯನ್ನು ಕಟಾವು ಮಾಡಿ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.

ಮೈಸೂರು: ಟೊಮೇಟೊ (Tomato) ಮಾತ್ರವಲ್ಲದೇ ಶುಂಠಿ (Ginger) ಬೆಲೆ ಕೂಡ ಏರಿಕೆಯಾಗಿದೆ. ಈ ಹಿನ್ನೆಲೆ ಶುಂಠಿ ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಏರಿಕೆ ಹಿನ್ನೆಲೆ ಶುಂಠಿ ಕಳುವು ಮಾಡಲು ಜನರು ಮುಂದಾಗಿದ್ದಾರೆ. ಹೌದು ಜಿಲ್ಲೆಯ ಪಿರಿಯಾಪಟ್ಟಣ (Piryapattan) ತಾಲೂಕಿನ ಟಿಬೇಟಿಯನ್ ಕಾಲೋನಿಯ ಲಾಖಪಾ ಸೇರಿಂಗ್ ತಮ್ಮ ಜಮೀನಿನಲ್ಲಿ ಶುಂಠಿ ಬೆಳದಿದ್ದರು. ಕಳೆದ ರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಎಂಟು ಮೂಟೆಯಷ್ಟು ಫಸಲನ್ನು ಕಟಾವು ಮಾಡಿ ಮೂಟೆಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಶುಂಠಿ ಕಳೆದುಕೊಂಡು ಟಿಬೆಟಿಯನ್ ರೈತ ಕಂಗಾಲ ಆಗಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published on: Jul 30, 2023 10:39 AM