ಬಳ್ಳಾರಿ ಜಿಲ್ಲೆಯ ಹಲ್ಕುಂದಿ ಗ್ರಾಮದಲ್ಲಿ ರವಿವಾರ ರಾತ್ರಿ ಪ್ರತ್ಯಕ್ಷವಾಯಿತೊಂದು ಕರಡಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 08, 2022 | 11:45 AM

ಅದನ್ನು ಕಂಡು ನಾಯಿಗಳು ಬೊಗಳಲಾರಂಭಿಸಿದ ಬಳಿಕ ಜನ ಕೋಲುಗಳನ್ನು ಹಿಡಿದು ಹೊರಬಂದು ಅದನ್ನು ಓಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿಗೆ ಕರಡಿ ಹಾವಳಿ (bear menace) ಹೆಚ್ಚುತ್ತಿದೆ. ಜಿಲ್ಲ್ಲೆಯ ಕೆಲ ಗ್ರಾಮಗಳಲ್ಲಿ ಅವು ಪ್ರತ್ಯಕ್ಷವಾಗಿ ಜನರನ್ನು ಭೀತಿಗೊಳಪಡಿಸುವ ಘಟನೆಗಳನ್ನು ನಾವು ಆಗಾಗ ವರದಿ ಮಾಡುತ್ತಿದ್ದೇವೆ. ಕಳೆದ ರಾತ್ರಿ ಬಳ್ಳಾರಿ ತಾಲ್ಲೂಕಿನ ಹಲ್ಕುಂದಿ (Halkundi) ಗ್ರಾಮದಲ್ಲಿ ಕರಡಿ ಪ್ರವೇಶಿಸಿದ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಅದನ್ನು ಕಂಡು ನಾಯಿಗಳು (dogs) ಬೊಗಳಲಾರಂಭಿಸಿದ ಬಳಿಕ ಜನ ಕೋಲುಗಳನ್ನು ಹಿಡಿದು ಹೊರಬಂದು ಅದನ್ನು ಓಡಿಸಿದ್ದಾರೆ.