ಮೊದಲ ಬಾರಿ ಚಿಕ್ಕಮಗಳೂರು ಜಿಲ್ಲೆಗೆ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ; ಅಧಿಕಾರ ವಹಿಸಿಕೊಂಡ ಉಮಾ ಪ್ರಶಾಂತ್

ಮೊದಲ ಬಾರಿ ಚಿಕ್ಕಮಗಳೂರು ಜಿಲ್ಲೆಗೆ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ; ಅಧಿಕಾರ ವಹಿಸಿಕೊಂಡ ಉಮಾ ಪ್ರಶಾಂತ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 08, 2022 | 12:46 PM

ಚಿಕ್ಕಮಗಳೂರಿಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದಾರೆ.

ಚಿಕ್ಕಮಗಳೂರು:  ಐಪಿಎಸ್ ಅಧಿಕಾರಿ ಉಮಾ ಪ್ರಶಾಂತ್ ಅವರು ಚಿಕ್ಕಮಗಳೂರಿನ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಕಾಫಿನಾಡಿನಿಂದ ನಿರ್ಗಮಿಸಿದ ಎಸ್ ಪಿ ಹಾಕೆ ಅಕ್ಷಯ್ ಮಚಿಂದ್ರಾ ಅವರು ಉಮಾ ಪ್ರಶಾಂತ್ ಅವರಿಗೆ ಬೇಟನ್ ಹಸ್ತಾಂತರಿಸಿದ ಬಳಿಕ ಹೂಗುಚ್ಛ ನೀಡಿ ಸ್ವಾಗತಿಸಿದರು. ಅದಕ್ಕೂ ಮೊದಲು ಜಿಲ್ಲಾ ಪೊಲೀಸ್ ಸಿಬ್ಬಂದಿ ಸಕಲ ಸರಕಾರೀ ಗೌರವಗಳೊಂದಿಗೆ ಉಮಾರನ್ನು ಬರಮಾಡಿಕೊಂಡರು. ಚಿಕ್ಕಮಗಳೂರಿಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದಾರೆ.