ಹಳ್ಳಿ ಪವರ್ ಶೋನಲ್ಲಿ ನಡೆಯಿತು ದೊಡ್ಡ ಅವಘಡ
ಹಳ್ಳಿ ಪವರ್ ಶೋ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಶೋನಲ್ಲಿ ಒಂದು ಅವಘಡ ನಡೆದಿದೆ. ಶೋನಲ್ಲಿ ಮಹಿಳಾ ಮಣಿಗಳು ಎತ್ತಿನ ಗಾಡಿಯನ್ನು ರೈಡ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋನ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ .
‘ಹಳ್ಳಿ ಪವರ್’ ಶೋನಲ್ಲಿ (Halli Power Show) ದೊಡ್ಡ ಅವಘಡ ನಡೆದಿದೆ. ಈ ಬಾರಿ ಎತ್ತಿನ ಗಾಡಿ ಓಡಿಸೋ ಸ್ಪರ್ಧೆಯನ್ನು ಶೋನಲ್ಲಿ ಇಡಲಾಗಿತ್ತು. ಎತ್ತಿನ ಗಾಡಿ ಓಡಿಸೋದು ಎಂದರೆ ಅವುಗಳು ಕಾರು ಓಡಿಸಿದಷ್ಟು ಸುಲಭ ಅಲ್ಲವೇ ಅಲ್ಲ. ಆದರೂ, ಪ್ಯಾಟೆ ಹುಡುಗಿಯರು ಇದನ್ನು ಪ್ರಯತ್ನಿಸಿದರು. ಈ ವೇಳೆ ಎತ್ತಿನ ಗಾಡಿ ಎತ್ತೆತ್ತಲೋ ಸಾಗಿ ಅವರು ಕೆಳಕ್ಕೆ ಬಿದ್ದ ಘಟನೆ ನಡೆದಿದೆ. ಆ ಪ್ರೋಮೋನ ಜೀ ಪವರ್ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

