ಬಿಎಮ್​ಸಿಯ ಈ ಮಾರ್ಷಲ್ ತೋರಿರುವ ಕರ್ತವ್ಯ ನಿಷ್ಠೆ ನಮಗೆಲ್ಲ ಅನುಕರಣೀಯ; ವಿಡಿಯೋ ನೋಡಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2021 | 6:36 PM

ನಾಲ್ಕು ದಿನಗಳ ಹಿಂದೆ ಸುರೇಶ್ ಪವಾರ್ ಹೆಸರಿನ ಬಿಎಮ್​ಸಿ ಮಾರ್ಷಲ್ ತೋರಿದ ಕರ್ತವ್ಯ ಪ್ರಜ್ಞೆ ಕೇವಲ ಮಾರ್ಷಲ್​ಗಳಿಗೆ ಮಾತ್ರವಲ್ಲ ಬೇರೆ ಬೇರೆ ಕೆಲಸ ಮಾಡುವ ಜನರಿಗೆಲ್ಲ ಮಾದರಿಯಾಗಿದೆ.

ಮಾಸ್ಕ್ ಧರಿಸದೆ ರಸ್ತೆಗಳಲ್ಲಿ ಓಡಾಡುವವರಿಗೆ ದಂಡ ವಿಧಿಸಲು ನಮ್ಮ ಬಿಬಿಎಮ್​ಪಿ ಮಾರ್ಷಲ್​ಗಳನ್ನು ನೇಮಕ ಮಾಡಿಕೊಂಡಿರುವ ಹಾಗೆಯೇ, ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ (ಬಿಎಮ್​ಸಿ) ಸಹ ಮಾರ್ಷಲ್​​​ಗಳನ್ನು ನೇಮಿಸಿದೆ. ನಾಲ್ಕು ದಿನಗಳ ಹಿಂದೆ ಸುರೇಶ್ ಪವಾರ್ ಹೆಸರಿನ ಬಿಎಮ್​ಸಿ ಮಾರ್ಷಲ್ ತೋರಿದ ಕರ್ತವ್ಯ ಪ್ರಜ್ಞೆ ಕೇವಲ ಮಾರ್ಷಲ್​ಗಳಿಗೆ ಮಾತ್ರವಲ್ಲ ಬೇರೆ ಬೇರೆ ಕೆಲಸ ಮಾಡುವ ಜನರಿಗೆಲ್ಲ ಮಾದರಿಯಾಗಿದೆ. 36 ವರ್ಷ ವಯಸ್ಸಿನ ಪವಾರ ಅವರು ಪೂರ್ವ ಸಾಂತಾಕ್ರೂಜ್ ನಲ್ಲಿರುವ ಹನಮಾನ್ ಟೇಕ್ಡಿಯ ನಿವಾಸಿಯಾಗಿದ್ದು ಕಳೆದೆರಡು ವರ್ಷಗಳಿಂದ ಬಿಎಮ್ಸಿ ಯಲ್ಲಿ ಮಾರ್ಷಲ್ ಅಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಮೊನ್ನೆ ನಡೆದಂಥ ಘಟನೆ ಹಿಂದೆ ಯಾವತ್ತೂ ನಡೆದಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಅವತ್ತು ಏನು ನಡೆಯಿತು ಅನ್ನುವುದನ್ನು ಅವರ ಬಾಯಿಂದಲೇ ಕೇಳೋಣ.

‘ಬುಧವಾರದಂದು, ಸಂತಾಕ್ರೂಜ್ ಹನ್ಸ್ ಭುಗ್ರಾ ಸಿಗ್ನಲ್ ಬಳಿ ನಾನು ಕಾರ್ಯನಿರತನಾಗಿದ್ದೆ. ಆಗ ಕ್ಯಾಬ್ ಒಂದರಲ್ಲಿ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆಯನ್ನು ನೋಡಿದೆ. ಆಕೆಗೆ ನಾನು 200 ರೂ. ದಂಡ ತೆರುವಂತೆ ಹೇಳಿದಾಗ ಮರುಮಾತಾಡದೆ ಹಣ ನೀಡಲು ಮುಂದಾದಳು. ಆದರೆ, ಕ್ಯಾಬ್ ಡ್ರೈವರ್ ಕಾರನ್ನು ನಿಲ್ಲಿಸದೆ ಅದನ್ನು ಓಡಿಸಲಾರಂಭಿಸಿದ. ನಾನು ಅವನಿಗೆ ಗಾಡಿಯನ್ನು ಪಕ್ಕಕ್ಕೆ ಹಾಕು ಅಂತ ವಿನಂತಸಿಕೊಂಡರೂ ಅವನು ನನ್ನ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ. ಹಾಗಾಗಿ ನಾನು ಕಾರು ಮುಂದೆ ಹೋಗಿ ಬಾನೆಟ್ಗೆ ಜೋತುಬಿದ್ದೆ. ಆದರೂ ಅವನು ಕಾರು ನಿಲ್ಲಿಸಲಿಲ್ಲ. ಅವನು ಕಾರಿನ ವೇಗವನ್ನು ಹೆಚ್ಚಿಸಿ ತಪ್ಪಿಸಿಕೊಂಡಾಗ ನನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತು,’ ಎಂದು ಪವಾರ್ ಹೇಳಿದ್ದಾರೆ.

ಕಾರಿನ ವೇಗ ಹೆಚ್ಚಿದ ಕೂಡಲೇ ಪವಾರ್ ಪಕ್ಕಕ್ಕೆ ಸರಿದಿದ್ದರಿಂದ ಅವರಿಗೆ ಗಾಯವಾಗಿಲ್ಲ್ಲ. ರಸ್ತೆ ಮೇಲೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಪವಾರ್ ಅವರ ಕರ್ತವ್ಯ ನಿಷ್ಠೆಯ ವಿಡಿಯೋ ಶೂಟ್ ಮಾಡಿ ಸೋಶಿಯಲ್ ಮೀಡಿಯಾನಲ್ಲಿ ಹರಿಬಿಟ್ಟಿದ್ದು ಅದ ವೈರಲ್ ಅಗಿಬಿಟ್ಟಿದೆ. ನೀವೂ ನೋಡಿ ಮಾರಾಯ್ರೇ.

ಇದನ್ನೂ ಓದಿ: Viral Video: ಭಾರೀ ಮಳೆಯಿಂದ ಕೊಚ್ಚಿ ಹೋಯ್ತು ಡೆಹ್ರಾಡೂನ್- ಹೃಷಿಕೇಶದ ರಸ್ತೆ; ವಿಡಿಯೋ ವೈರಲ್