ತಾಲಿಬಾನಿಗಳು ಪಂಜಶೀರ್ ಪ್ರಾಂತ್ಯವನ್ನು ಆಕ್ರಮಿಸಿಕೊಳ್ಳುವ ದಿನಗಳು ಹತ್ತಿರವಾದಂತಿವೆ!
ಅಹ್ಮದ್ ಮಸ್ಸೂದ್ ಅವರು ಕದನ ವಿರಾಮಕ್ಕಾಗಿ ಮನವಿ ಸಲ್ಲಿಸಿದ್ದರೆ ಅದೊಂದು ಆಶ್ವರ್ಯಕರ ಮತ್ತು ಅಫ್ಘಾನಿಸ್ತಾನದ ಮಟ್ಟಿಗೆ ಒಂದು ಆಘಾತಕಾರಿ ಬೆಳವಣಿಗೆ.
ಅಫ್ಘಾನಿಸ್ತಾನದ ಎಲ್ಲ ಪ್ರಾಂತ್ಯಗಳ ಮೇಲೆ ತಾಲಿಬಾನ್ ಸಂಪೂರ್ಣ ಹಿಡಿತ ಸಾಧಿಸುವ ಸಮಯ ಸನ್ನಿಹಿತವಾಗುತ್ತಿರುವಂತಿದೆ. ಪಂಜಶೀರ್ ಕಣಿವೆ ಪ್ರದೇಶ ಭಾಗದಿಂದ ವ್ಯತಿರಿಕ್ತವಾದ ಮಾಹಿತಿ ಲಭ್ಯವಾಗುತ್ತಿದೆ. ಒಂದು ಮೂಲದ ಪ್ರಕಾರ ತಾಲಿಬಾನ್ ಕ್ರಮೇಣವಾಗಿ ಪಂಜಶೀರ್ನ ಒಂದೊಂದೇ ಭಾಗವನ್ನು ಆಕ್ರಮಿಸಿಕೊಳ್ಳುತ್ತಾ ಮುಂದೆ ಸಾಗಿದೆ. ಮತ್ತೊಂದು ಮೂಲದ ಪ್ರಕಾರ ಪಂಜಶೀರ್ ಜನ ಯಾವ ಹೆದರಿಕೆಗೂ ಬಗ್ಗದೆ ಜಗ್ಗದೆ ತಾಲಿಬಾನ್ ಸೇನೆಯೊಂದಿಗೆ ಯುದ್ಧ ನಡೆಸಿದ್ದಾರೆ ಮತ್ತು ಅನೇಕ ತಾಲಿಬಾನಿಗಳನ್ನು ಕೊಂದು ಹಾಕಿದ್ದಾರೆ. ಪಂಜಶೀರ್ ಪ್ರಾಂತ್ಯದ ನಾಯಕ ಅಹ್ಮದ್ ಮಸ್ಸೂದ್ ಅವರು ಶಸ್ತ್ರಾಸ್ತ್ರಗಳನ್ನು ಚೆಲ್ಲಿದ್ದು ಕದನವಿರಾಮ ಘೋಷಿಸುವಂತೆ ತಾಲಿಬಾನ ನಾಯಕರನ್ನು ಆಗ್ರಹಿಸುತ್ತಿದ್ದಾರೆ ಎಂದು ಮತ್ತೊಂದು ಮೂಲ ಹೇಳುತ್ತದೆ.
ಈ ವಿಡಿಯೋ ನೋಡುತ್ತಿದ್ದರೆ, ಪಂಜಶೀರ್ ಜನ ತಾಲಿಬಾನಿಗಳಿಗೆ ಶರಣಾಗಿರುವ ಅಥವಾ ಇಷ್ಟರಲ್ಲೇ ಆಗುವ ಸೂಚನೆಗಳು ಕಾಣುತ್ತಿವೆ. ಇಲ್ಲಿ ನಿಮ್ಮ ಕಣ್ಣಿಗೆ ಕಾಣುತ್ತಿರೋದು ತಾಲಿಬಾನಿಗಳು ಮಿಲಿಟರಿ ವಾಹನಗಳಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಪಂಜಶೀರ್ ನತ್ತ ಮುನ್ನುಗ್ಗುತ್ತಿರುವ ದೃಶ್ಯ. ಅದಾಗಲೇ ತಾಲಿಬಾನಿಗಳ ಮುಖದ ಮೇಲೆ ವಿಜಯೋತ್ಸವದ ನಗೆ ಕಾಣುತ್ತಿದೆ. ಅವರ ಈ ಪರೇಡ್ ಪಂಜಶೀರ್ ಜನರಲ್ಲಿ ಹೆದರಿಕೆ ಹುಟ್ಟಿಸುವ ಪ್ರಯತ್ನ ಎಂದು ಕೆಲ ವಿದೇಶೀ ಮೂಲಗಳು ವರದಿ ಮಾಡಿವೆ.
ಅಹ್ಮದ್ ಮಸ್ಸೂದ್ ಅವರು ಕದನ ವಿರಾಮಕ್ಕಾಗಿ ಮನವಿ ಸಲ್ಲಿಸಿದ್ದರೆ ಅದೊಂದು ಆಶ್ವರ್ಯಕರ ಮತ್ತು ಅಫ್ಘಾನಿಸ್ತಾನದ ಮಟ್ಟಿಗೆ ಒಂದು ಆಘಾತಕಾರಿ ಬೆಳವಣಿಗೆ. ಯಾಕೆಂದರೆ, ಅವರ ನೇತೃತ್ವದ ಉತ್ತರ ಪ್ರತಿರೋಧ ಪಡೆಗಳು ತಾಲಿಬಾನ್ ದೊಡ್ಡ ಸವಾಲು ಒಡ್ಡಲಿವೆ ಮತ್ತು ಅವರ ಸೇನೆಯನ್ನು ಹಿಮ್ಮೆಟ್ಟಿಸಲಿವೆ ಎಂದು ಭಾವಿಸಲಾಗಿತ್ತು, ಆದರೆ ಅವರು ಪ್ರತಿರೋಧ ಒಡ್ಡದೆ ಶರಣಾಗುತ್ತಿರುವುದು ತಾಲಿಬಾನಿಗಳ ಪ್ರಾಬಲ್ಯದ ಸಂಕೇತವಾಗಿದೆ.
ಇದನ್ನೂ ಓದಿ: Video:‘ಪಾಕಿಸ್ತಾನ ಸರ್ವನಾಶವಾಗಲಿ’- ಕಾಬೂಲ್ನಲ್ಲಿ ಅಫ್ಘಾನ್ ಮಹಿಳೆಯರ ಪ್ರತಿಭಟನೆ; ತಾಲಿಬಾನಿಗಳಿಂದ ಗುಂಡಿನ ದಾಳಿ, ಕುಚೋದ್ಯ