ಪಂಜಶೀರ್ ಗವರ್ನರ್ ಕಚೇರಿ ಮೇಲೆ ತಮ್ಮ ಧ್ವಜ ಹಾರಿಸಿದ ತಾಲಿಬಾನಿಗಳು ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎನ್ನುತ್ತಿದ್ದಾರೆ
ಪಂಜಶೀರ್ ಜನರಿಗೆ ನಾವು ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ, ಅವರನ್ನು ಗೌರವ ಮತ್ತು ಆದರಗಳೊಂದಿಗೆ ನಡೆಸಿಕೊಳ್ಳುತ್ತೇವೆ ಅಂತಲೂ ಮುಜಾಹಿದ್ ಹೇಳಿದ್ದಾನೆ.
ಸೋಮವಾರದಂದೇ ತಾವು ಪ್ರತಿರೋಧ ಪಡೆಯನ್ನು ಹಿಮ್ಮೆಟ್ಟಿಸಿ ಪಂಜಶೀರ್ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ಹೇಳುತ್ತಿದೆ. ಇಡೀ ಅಫ್ಘಾನಿಸ್ತಾನದ ಮೇಲೆ ಪ್ರಭುತ್ವ ಸಾಧಿಸಿದ್ದೇವೆ ಎಂದು ತಾಲಿಬಾನಿಗಳು ಎದಯುಬ್ಬಿಸಿ ಹೇಳುತ್ತಿದ್ದು ನಮ್ಮ ಪಾಲಿಗೆ ಯುದ್ಧ ಕೊನೆಗೊಂಡಂತಾಗಿದೆ ಎಂದು ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ. ಅದರೆ, ತಾಲಿಬಾನಿಗಳು ಮಾಡುತ್ತಿರುವ ದಾವೆಯನ್ನು ಪಂಜಶೀರ್ ಸಾರಾಸಗಟು ತಳ್ಳಿಹಾಕಿದೆ. ಆದರೆ ಪಂಜಶೀರ್ ಗವರ್ನರ್ ಕಚೇರಿಯ ಮೇಲೆ ತಾಲಿಬಾನಿಗಳು ತಮ್ಮ ಧ್ವಜ ಹಾರಿಸಿದ್ದು ವೈರಲ್ ಆಗಿದೆ. ವಿಡಿಯೋನಲ್ಲಿ ಬಂದೂಕುಧಾರಿ ತಾಲಿಬಾನಿಗಳು ತಮ್ಮ ಕಪ್ಪು ಮತ್ತು ಬಿಳುಪು ಧ್ವಜ ಹಾರಿಸುತ್ತಿರುವುದು ಕಾಣುತ್ತಿದೆ.
ಅದಾದ ನಂತರ ಹೇಳಿಕೆಯೊಂದನ್ನು ನೀಡಿರುವ ತಾಲಿಬಾನ್ ಬಾತ್ಮೀದಾರ ಜಬಿಹುಲ್ಲಾಹ್ ಮುಜಾಹಿದ್, ‘ಸೇನೆಯ ರೂಪದಲ್ಲಿ ನಮ್ಮ ಕೊನೆಯ ವೈರಿಯಾಗಿದ್ದ ಪಂಜ್ಶೀರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದೇವೆ. ಸರ್ವಶಕ್ತನಾದ ದೇವರ ಸಹಾಯದಿಂದ ಮತ್ತು ನಮ್ಮ ದೇಶ ಸಂಪೂರ್ಣ ಸಹಕಾರದಿಂದ, ಇಡೀ ದೇಶದ ಸಂರಕ್ಷಣೆ ಮತ್ತು ಭದ್ರತೆಗಾಗಿ ನಾವು ಮಾಡಿಕೊಂಡಿದ್ದ ಸಂಕಲ್ಪ ಮತ್ತು ಎಲ್ಲ ಪ್ರಯತ್ನಗಳು ಈಡೇರಿವೆ,’ ಎಂದು ಹೇಳಿದ್ದಾನೆ.
ಪಂಜಶೀರ್ ನಲ್ಲಿ ಇನ್ನೊಂದು ಹೇಳಿಕೆ ನೀಡಿದ ಜಬಿಹುಲ್ಲಾಹ್ ಮುಜಾಹಿದ್, ‘ಪ್ರತಿರೋಧ ದಳದ ಅನೇಕರು ನಮ್ಮೊಂದಿಗೆ ಯುದ್ಧ ನಡೆಸಿ ಸೋತರು ಮತ್ತು ಕೆಲವರು ಪಲಾಯನಗೈದರು,’ ಅಂತ ಹೇಳಿದ್ದಾನೆ. ‘ದಬ್ಬಾಳಿಕೆಗೆ ಒಳಗಾಗಿದ್ದ ಗೌರವಾನ್ವಿತ ಪಂಜಶೀರ್ ಜನ ತಮ್ಮನ್ನು ಒತ್ತೆಯಾಳಗಳನ್ನಾಗಿ ಮಾಡಿಕೊಂಡಿದ್ದ ಜನರಿಂದ ಮುಕ್ತರಾಗಿದ್ದಾರೆ,’ ಎಂದು ಮುಜಾಹಿದ್ ಹೇಳಿದ್ದಾನೆ.
ولایت پنجشیر آخرین لانهء دشمن مزدور نیز به گونه کامل فتح گردید https://t.co/95ySJ5ppo6 pic.twitter.com/CCWKFt0zsb
— Zabihullah (..ذبـــــیح الله م ) (@Zabehulah_M33) September 6, 2021
ಪಂಜಶೀರ್ ಜನರಿಗೆ ನಾವು ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ, ಅವರನ್ನು ಗೌರವ ಮತ್ತು ಆದರಗಳೊಂದಿಗೆ ನಡೆಸಿಕೊಳ್ಳುತ್ತೇವೆ ಅಂತಲೂ ಮುಜಾಹಿದ್ ಹೇಳಿದ್ದಾನೆ.
TRT World spoke to Ahmed Massoud’s spokesperson minutes before the Taliban claimed victory in Panjshir, the last hold-out in Afghanistan, and the resistance says the fight continues and the movement is at an advantage pic.twitter.com/62zbkCLajX
— TRT World Now (@TRTWorldNow) September 6, 2021