Video:‘ಪಾಕಿಸ್ತಾನ ಸರ್ವನಾಶವಾಗಲಿ’- ಕಾಬೂಲ್​​ನಲ್ಲಿ ಅಫ್ಘಾನ್ ಮಹಿಳೆಯರ ಪ್ರತಿಭಟನೆ; ತಾಲಿಬಾನಿಗಳಿಂದ ಗುಂಡಿನ ದಾಳಿ, ಕುಚೋದ್ಯ

ಪಾಕ್ ವಿರೋಧಿ ಪ್ರತಿಭಟನಾಕಾರರು ಕಾಬೂಲ್​ನ ಸೆರೆನಾ ಹೋಟೆಲ್​ನತ್ತ, ಘೋಷಣೆ ಕೂಗುತ್ತ ಹೊರಟಿದ್ದಾರೆ. ಈ ಮಧ್ಯೆ ಅಧ್ಯಕ್ಷರ ಭವನದ ಎದುರು ಗುಂಪುಗೂಡಿದ್ದರು.

Video:‘ಪಾಕಿಸ್ತಾನ ಸರ್ವನಾಶವಾಗಲಿ’- ಕಾಬೂಲ್​​ನಲ್ಲಿ ಅಫ್ಘಾನ್ ಮಹಿಳೆಯರ ಪ್ರತಿಭಟನೆ; ತಾಲಿಬಾನಿಗಳಿಂದ ಗುಂಡಿನ ದಾಳಿ, ಕುಚೋದ್ಯ
ಮಹಿಳೆಯರಿಂದ ಪ್ರತಿಭಟನೆ
Follow us
TV9 Web
| Updated By: Lakshmi Hegde

Updated on:Sep 07, 2021 | 4:22 PM

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಪಾಕಿಸ್ತಾನಿ ವಿರೋಧಿ ಪ್ರತಿಭಟನೆ (Anti-Pakistan Protest) ನಡೆಸುತ್ತಿದ್ದರೆ, ತಾಲಿಬಾನಿ (Taliban Terrorists)ಗಳು ಆ ಮಹಿಳೆಯರ ಮೇಲೆ ಗುಂಡಿನ ದಾಳಿ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ (Kabul)​ನಲ್ಲೀಗ ಪಾಕ್​ ವಿರೋಧಿ ಪ್ರತಿಭಟನೆಗಳು ಶುರುವಾಗಿವೆ. ಅಪಾರ ಸಂಖ್ಯೆಯ ಮಹಿಳೆಯರು ಪಾಕಿಸ್ತಾನ, ಅದರ ಗುಪ್ತಚರ ಸಂಸ್ಥೆ ಐಎಸ್​ಐ (ISI) ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದಾರೆ. ಈ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸಿಟ್ಟಿಗೆದ್ದ ತಾಲಿಬಾನಿಗಳು ಮಹಿಳೆಯರ ಮೇಲೆ ಗುಂಡು ಹಾರಿಸುತ್ತಿದ್ದಾರೆ. 

ಸ್ಥಳೀಯ ಮಾಧ್ಯಮ ಅಸ್ವಾಕಾ ವಿಡಿಯೋವನ್ನು ಕೂಡ ಶೇರ್​ ಮಾಡಿದೆ. ಈ ಪಾಕ್ ವಿರೋಧಿ ಪ್ರತಿಭಟನಾಕಾರರು ಕಾಬೂಲ್​ನ ಸೆರೆನಾ ಹೋಟೆಲ್​ನತ್ತ, ಘೋಷಣೆ ಕೂಗುತ್ತ ಹೊರಟಿದ್ದಾರೆ. ಈ ಮಧ್ಯೆ ಅಧ್ಯಕ್ಷರ ಭವನದ ಎದುರು ಗುಂಪುಗೂಡಿದ್ದರು. ಅದೇ ಹೊತ್ತಲ್ಲಿ ತಾಲಿಬಾನಿಗಳು ಅಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ ಅವರು, ಬರುಬರುತ್ತ ಪ್ರತಿಭಟನಾಕಾರರಿಗೆ ಗುರಿಯಿಟ್ಟೇ ಹೊಡೆಯಲು ಶುರು ಮಾಡಿದರು ಎಂದು ವರದಿ ಮಾಡಿದೆ. ಇನ್ನು ಸೆರೆನಾ ಹೋಟೆಲ್​ನಲ್ಲಿ ಪಾಕಿಸ್ತಾನ ಐಎಸ್​ಐ ನಿರ್ದೇಶಕ ಕಳೆದ ಒಂದು ವಾರದಿಂದಲೂ ವಾಸವಾಗಿದ್ದಾರೆ. ಇದೇ ಕಾರಣಕ್ಕೆ ಪ್ರತಿಭಟನಾಕಾರರು ಆ ಕಡೆಗೆ ಹೊರಟಿದ್ದಾರೆ.

ಪ್ರತಿಭಟನೆಯಲ್ಲಿ ಪುರುಷರೂ ಇದ್ದಾರೆ.. ಈ ಪಾಕ್​ ವಿರೋಧಿ ಪ್ರತಿಭಟನೆಯಲ್ಲಿ ನೂರಾರು ಜನ ತೊಡಗಿದ್ದಾರೆ. ಪುರುಷರೂ ಭಾಗವಹಿಸಿದ್ದಾರೆ. ಆದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಇವರು ಮೆರವಣಿಗೆಯ ದಾರಿಯುದ್ದಕ್ಕೂ ಪಾಕಿಸ್ತಾನಿ ವಿರೋಧಿ ಘೋಷಣೆ ಕೂಗುತ್ತಿದ್ದು ಅಂಥ ಪ್ಲೇಕಾರ್ಡ್​ಗಳನ್ನೇ ಹಿಡಿದುಕೊಂಡಿದ್ದಾರೆ. ಮೊದಲು ಕಾಬೂಲ್​ನ ರಸ್ತೆಯಲ್ಲಿ ಶುರುವಾದ ಪ್ರತಿಭಟನೆ ಬರುಬರುತ್ತ ಬಲ್ಖ್​ ಪ್ರಾಂತ್ಯಕ್ಕೂ ಹಬ್ಬಿತು.  ಪ್ರತಿಭಟನಾಕಾರರು ಅದೆಷ್ಟು ಕ್ರೋಧಗೊಂಡಿದ್ದಾರೆಂದರೆ..ತುಂಬ ಆವೇಶ ಭರಿತವಾಗಿ ‘ಪಾಕಿಸ್ತಾನ ನಾಶವಾಗಲಿ’ ‘ಐಎಸ್​ಐ ನಾಶವಾಗಲಿ’ ಎಂದು ಘೋಷಣೆ ಕೂಗುತ್ತಿದ್ದಾರೆ. ಹಾಗೇ, ತಮಗೆ ಸ್ವಾತಂತ್ರ್ಯ ಬೇಕು ಎಂದೂ ಆಗ್ರಹಿಸುತ್ತಿದ್ದಾರೆ.

ಪಂಜಶಿರ್​ ಆಕ್ರಮಣ ಮಾಡಲು ಯಾರಿಗೂ ಹಕ್ಕಿಲ್ಲ ಶನಿವಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಮುಖ್ಯಸ್ಥ ಫೈಜ್​ ಹಮೀದ್​ ಕಾಬೂಲ್​ಗೆ ಭೇಟಿ ಕೊಟ್ಟಿದ್ದರು. ಇನ್ನು ತಾಲಿಬಾನಿಗಳಿಗೆ ಯಾವುದೇ ಬೆಂಬಲ ಕೊಡಲು ಸಿದ್ಧ ಎಂಬುದನ್ನು ಪಾಕಿಸ್ತಾನ ಹೇಳಿಕೊಳ್ಳುತ್ತಲೇ ಬಂದಿದೆ. ಈ ಮಧ್ಯೆ ಅಫ್ಘಾನ್​ನಲ್ಲಿ ನೂತನ ಸರ್ಕಾರ ರಚನೆಯಾಗುವ ಹೊತ್ತಲ್ಲಿ ಪಾಕಿಸ್ತಾನ ಬಹುಮುಖ್ಯ ಪಾತ್ರ ವಹಿಸುತ್ತಿದೆ ಎಂದೂ ಹೇಳಲಾಗಿದೆ.  ಅದಕ್ಕೂ ಮಿಗಿಲಾಗಿ, ಕಳೆದ 20ವರ್ಷಗಳಿಂದಲೂ ತಾಲಿಬಾನ್​ಗೆ ಅಗತ್ಯವಿರುವ ನೆರವು, ಆಶ್ರಯಗಳನ್ನು ನೀಡಿದ್ದಾಗಿ ಪಾಕ್​ ಒಪ್ಪಿಕೊಂಡಿದೆ. ಹಾಗೇ ತಾಲಿಬಾನ್ ಮುಖಂಡರೂ ಕೂಡ ಪಾಕಿಸ್ತಾನದ ಬಗ್ಗೆ ಒಲವು ಹೊಂದಿದ್ದಾರೆ. ನಮ್ಮಲ್ಲಿ ಅದೆಷ್ಟೋ ಜನರ ಪತ್ನಿ, ಮಕ್ಕಳು ಪಾಕ್​ನಲ್ಲಿಯೇ ಇದ್ದಾರೆ ಎಂಬುದನ್ನು ವಕ್ತಾರ ಸುಹೇನ್​ ಶಹೀಲ್​ ಹಿಂದೆಯೇ ಹೇಳಿದ್ದಾರೆ.

ಆದರೆ ತಾಲಿಬಾನಿಗಳ ಆಡಳಿತ ಒಪ್ಪದ ಅಫ್ಘಾನ್​ ನಾಗರಿಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಪ್ರತಿಭಟನೆ ಶುರುಮಾಡಿದ್ದಾರೆ. ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿರುವ ಪಾಕ್ ಸರ್ವನಾಶವಾಗಲಿ ಎಂದು ಹೇಳುತ್ತಿದ್ದಾರೆ.  ಹಾಗೇ, ಪ್ರತಿಭಟನಾ ನಿರತ ಮಹಿಳೆಯೊಬ್ಬರು ಮಾಧ್ಯಮಗಳೊಟ್ಟಿಗೆ ಮಾತನಾಡಿ, ಪಂಜಶಿರ್​ನ್ನು ಅತಿಕ್ರಮಣ ಮಾಡಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಪಾಕಿಸ್ತಾನವಾಗಲೀ, ತಾಲಿಬಾನಿಗಳೇ ಆಗಲಿ ಅವರಿಗೆ ಯಾವುದೇ ಹಕ್ಕು, ಅಧಿಕಾರ ಇಲ್ಲ ಎಂದು ಹೇಳಿದ್ದಾರೆ.

ಪ್ರತಿಭಟನೆ ವರದಿಗೆ ತೆರಳಿದ ಪತ್ರಕರ್ತರನ್ನು ಬಂಧಿಸಿದ ತಾಲಿಬಾನಿಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವುದೇ ಭಂಗ ತರುವುದಿಲ್ಲ ಎಂದು ಹೇಳಿರುವ ತಾಲಿಬಾನ್​ ಅದನ್ನು ಪದೇಪದೆ ಸುಳ್ಳು ಮಾಡುತ್ತಿದ್ದಾರೆ. ಇಂದು ಕಾಬೂಲ್​ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರೋಧಿ ಪ್ರತಿಭಟನೆಯ ವರದಿಗೆ ತೆರಳಿರುವ ಪತ್ರಕರ್ತರು, ನ್ಯೂಸ್​ ಚಾನೆಲ್​ ಸಿಬ್ಬಂದಿ, ಕ್ಯಾಮರಾಮೆನ್​ಗಳನ್ನೆಲ್ಲ ತಾಲಿಬಾನಿಗಳು ಬಂಧಿಸಿದ್ದಾರೆ. ಅವರಿಗೆ  ದೃಶ್ಯ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಫೋಟೊಗ್ರಾಫರ್​ ಆಂಡ್ರ್ಯೂ ಕ್ವಿಲ್ಟಿ ಎಂಬುವರು ಟ್ವೀಟ್ ಮಾಡಿದ್ದು, ತಾಲಿಬಾನಿಗಳಲ್ಲೂ ಕೆಲವು ಸುಶಿಕ್ಷಿತರಿದ್ದಾರೆ. ಅವರು ಸುಮಾರು 300-500 ಜನರಿಗೆ  ಕಾಬೂಲ್​ ರಸ್ತೆಯಲ್ಲಿ ಹಲವು ಕಿಮೀ ದೂರಗಳವರೆಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದರು. ಆದರೆ ಜನ್​ಬಾಕ್​ ಚೌಕದ ಬಳಿ ಕಾವಲಿಗೆ ನಿಂತಿದ್ದ ಕೆಲವರು ಗಾಳಿಯಲ್ಲಿ ಮನಸಿಗೆ ಬಂದಂತೆ ಗುಂಡು ಹಾರಿಸಿದರು. ಪ್ರತಿಭಟನಾಕಾರರಿಗೆ ಥಳಿಸಿದರು. ಸುದ್ದಿ ಮಾಧ್ಯಮದವರ ವಾಹನ, ಕ್ಯಾಮರಾಗಳನ್ನೆಲ್ಲ ಧ್ವಂಸ ಮಾಡಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Pawan Kalyan: ಪವನ್​ ಕಲ್ಯಾಣ್​ ಸಿನಿಮಾದ ಡೈಲಾಗ್​ ಹೊಡೆದ ವೀರೇಂದ್ರ ಸೆಹ್ವಾಗ್; ಇಲ್ಲಿದೆ ವೈರಲ್​ ವಿಡಿಯೋ

Kolkata: ಶಾಲಾ ಶಿಕ್ಷಕಿ ಮತ್ತು ಆಕೆಯ ಪುತ್ರನ ಭೀಕರ ಹತ್ಯೆ; ಪತಿ-ಟ್ಯೂಷನ್​ ಶಿಕ್ಷಕನ ವಿಚಾರಣೆ

Published On - 3:55 pm, Tue, 7 September 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?