AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolkata: ಶಾಲಾ ಶಿಕ್ಷಕಿ ಮತ್ತು ಆಕೆಯ ಪುತ್ರನ ಭೀಕರ ಹತ್ಯೆ; ಪತಿ-ಟ್ಯೂಷನ್​ ಶಿಕ್ಷಕನ ವಿಚಾರಣೆ

Crime News: ತಾಯಿ-ಮಗನ ಶವ  ರಕ್ತದ ಮಡುವಲ್ಲಿ ಬಿದ್ದಿತ್ತು. ಆ ಬಾಲಕ ಶಾಲೆಯ ಯೂನಿಫಾರ್ಮ್​ನಲ್ಲೇ ಇದ್ದ. ಆತ ಕಟ್ಟಿದ್ದ ಟೈ ಕೂಡ ಹಾಗೇ ಇತ್ತು.

Kolkata: ಶಾಲಾ ಶಿಕ್ಷಕಿ ಮತ್ತು ಆಕೆಯ ಪುತ್ರನ ಭೀಕರ ಹತ್ಯೆ; ಪತಿ-ಟ್ಯೂಷನ್​ ಶಿಕ್ಷಕನ ವಿಚಾರಣೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Sep 07, 2021 | 2:52 PM

Share

ಕೋಲ್ಕತ್ತ: ಶಾಲಾ ಶಿಕ್ಷಕಿ (School Teacher) ಮತ್ತು ಅವರ 14 ವರ್ಷದ ಪುತ್ರನ ಮೃತದೇಹ  ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷಕಿಯ ಪತಿ ಮತ್ತು ಆ ಹುಡುಗನಿಗೆ ಟ್ಯೂಷನ್​ ಹೇಳುತ್ತಿದ್ದ ಶಿಕ್ಷಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಿಕ್ಷಕಿಯ ಕುಟುಂಬ ಕೋಲ್ಕತ್ತದ ಬೆಹಾಲಾ ಪರ್ನಶ್ರೀ ಏರಿಯಾದ ಒಂದು ಬಹುಅಂತಸ್ತಿನ ವಸತಿ ಕಟ್ಟಡದ ಫ್ಲ್ಯಾಟ್​ವೊಂದರಲ್ಲಿ ವಾಸವಾಗಿತ್ತು. ಸೋಮವಾರ ಸಂಜೆ  ಮನೆಗೆ ಬರುವಷ್ಟರಲ್ಲಿ ಬಾಗಿಲು ತೆರೆದೇ ಇತ್ತು. ಒಳಗೆ ಬಂದು ನೋಡಿದಾಗ ಪತ್ನಿ ಮತ್ತು ಮಗ ಇಬ್ಬರೂ ಶವವಾಗಿ ಬಿದ್ದಿದ್ದರು ಎಂದು ಶಿಕ್ಷಕಿಯ ಪತಿ ತಿಳಿಸಿದ್ದಾರೆ.  

ತಾಯಿ-ಮಗನ ಶವ  ರಕ್ತದ ಮಡುವಲ್ಲಿ ಬಿದ್ದಿತ್ತು. ಆ ಬಾಲಕ ಶಾಲೆಯ ಯೂನಿಫಾರ್ಮ್​ನಲ್ಲೇ ಇದ್ದ. ಆತ ಕಟ್ಟಿದ್ದ ಟೈ ಕೂಡ ಹಾಗೇ ಇತ್ತು. ಹುಡುಗನ ದೇಹ ಬೆಡ್​ ಮೇಲೆ ಇದ್ದರೆ, ತಾಯಿಯ ಶವ ನೆಲದ ಮೇಲೆ ಬಿದ್ದಿತ್ತು. ಇವರಿಬ್ಬರನ್ನೂ ಅಡುಗೆ ಮನೆಯಲ್ಲಿದ್ದ ಚಾಕುವಿನಲ್ಲಿಯೇ ಕೊಲ್ಲಲಾಗಿದೆ ಎಂದು ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತದೇಹಗಳನ್ನು ಪೋಸ್ಟ್ ಮಾರ್ಟಮ್​ಗೆ ಕಳಿಸಲಾಗಿದೆ. ಸದ್ಯ ಮೃತ ಶಿಕ್ಷಕಿಯ ಪತಿ ಮತ್ತು ಮನೆ ಪಾಠ ಹೇಳಿಕೊಡಲು ಬರುತ್ತಿದ್ದ ಶಿಕ್ಷಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೋಮವಾರ ಸಂಜೆ 5ಗಂಟೆ ಹೊತ್ತಿಗೆ ನಾನು ಅವರ ಮನೆಗೆ ಹೋದೆ. ಆದರೆ ಬಾಗಿಲು ಹಾಕಿತ್ತು. ಬಾಗಿಲು ಬಡಿದರೂ ಯಾರೂ ತೆರೆಯಲಿಲ್ಲ. ಮನೆಯೊಳಗೆ ಕತ್ತಲಿತ್ತು. ಹಾಗಾಗಿ ವಾಪಸ್ ಹೋದೆ ಎಂದು ಟ್ಯೂಷನ್​ ಶಿಕ್ಷಕ ಹೇಳಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹಾವಿನ ಬಾಲ ಹಿಡಿದು ಕಚ್ಚಿಸಿಕೊಳ್ಳುತ್ತಿದ್ದ ಉರಗ ತಜ್ಞ; ಸೆಕೆಂಡುಗಳಲ್ಲಿ ಅಪಾಯದಿಂದ ಪಾರು

Redmi 10 Prime: 6000mAh ಬ್ಯಾಟರಿ, 50MP ಕ್ಯಾಮೆರಾದ ರೆಡ್ಮಿ 10 ಪ್ರೈಮ್ ಈಗ ಖರೀದಿಗೆ ಲಭ್ಯ: ಅತಿ ಕಡಿಮೆ ಬೆಲೆ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?