AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi 10 Prime: 6000mAh ಬ್ಯಾಟರಿ, 50MP ಕ್ಯಾಮೆರಾದ ರೆಡ್ಮಿ 10 ಪ್ರೈಮ್ ಈಗ ಖರೀದಿಗೆ ಲಭ್ಯ: ಅತಿ ಕಡಿಮೆ ಬೆಲೆ

ಒಟ್ಟು ಎರಡು ಆಯ್ಕೆಯಲ್ಲಿ ರೆಡ್ಮಿ 10 ಪ್ರೈಮ್ ಸ್ಮಾರ್ಟ್​ಫೋನ್ ಮಾರಾಟವಾಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ಮತ್ತು ಶವೋಮಿಯ ಅಧಿಕೃತ ವೆಬ್​ಸೈಟ್​ನಲ್ಲಿ ಈ ಸ್ಮಾರ್ಟ್​ಫೋನ್ ಅನ್ನು ಖರೀದಿಸಬಹುದು.

Redmi 10 Prime: 6000mAh ಬ್ಯಾಟರಿ, 50MP ಕ್ಯಾಮೆರಾದ ರೆಡ್ಮಿ 10 ಪ್ರೈಮ್ ಈಗ ಖರೀದಿಗೆ ಲಭ್ಯ: ಅತಿ ಕಡಿಮೆ ಬೆಲೆ
redmi 10 prime
TV9 Web
| Updated By: Vinay Bhat|

Updated on: Sep 07, 2021 | 2:22 PM

Share

ಚೀನಾ ಮೂಲದ ಶವೋಮಿ (Xiaomi) ಕಂಪೆನಿಯು ಕಳೆದ ವಾರ ಅತಿ ಕಡಿಮೆ ಬೆಲೆಗೆ ಭಾರತದಲ್ಲಿ ಬಿಡುಗಡೆ ಮಾಡಿದ್ದ ರೆಡ್ಮಿ 10 ಪ್ರೈಮ್ (Redmi 10 Prime) ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ. 50 ಮೆಗಾಫಿಕ್ಸೆಲ್​ನ ಆಕರ್ಷಕ ಕ್ಯಾಮೆರಾ, ಅದ್ಭುತ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್​ಗಳನ್ನು ಹೊಂದಿರುವ ಈ ಸ್ಮಾರ್ಟ್​ಫೋನ್ ಈಗ ಸೇಲ್ ಪ್ರಾರಂಭಿಸಿದೆ.

ಒಟ್ಟು ಎರಡು ಆಯ್ಕೆಯಲ್ಲಿ ರೆಡ್ಮಿ 10 ಪ್ರೈಮ್ ಸ್ಮಾರ್ಟ್​ಫೋನ್ ಮಾರಾಟವಾಗುತ್ತಿದೆ. 4GB RAM ಮತ್ತು 64GB ಸ್ಟೋರೆಜ್ ಆಯ್ಕೆಗೆ 12,499 ರೂ. ಇದ್ದರೆ, 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 14,499 ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ಮತ್ತು ಶವೋಮಿಯ ಅಧಿಕೃತ ವೆಬ್​ಸೈಟ್​ನಲ್ಲಿ ಈ ಸ್ಮಾರ್ಟ್​ಫೋನ್ ಅನ್ನು ಖರೀದಿಸಬಹುದು. ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್ ಮೂಲಕ ನೀವು ಪಡೆದುಕೊಂಡರೆ 750 ರೂ. ಡಿಸ್ಕೌಂಟ್ ಸಿಗಲಿದೆ.

ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ 88 SoC ಪ್ರೊಸೆಸರ್ ಹೊತ್ತು ತಂದಿದ್ದು,  6.5 ಇಂಚಿನ ಪೂರ್ಣ ಹೆಚ್​ಡಿ ಪ್ಲಸ್ (1,080×2,400 ಪಿಕ್ಸೆಲ್​ಗಳು) ಅಡಾಪ್ಟಿವ್ ಸಿಂಕ್ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್​ನಿಂದ ಕೂಡಿದೆ.

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ನಿಂದ ಕೂಡಿದೆ. ಅಲ್ಟ್ರಾ ವೈಡ್ ಗಾಗಿ ಕಂಪೆನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. 2 ಮೆಗಾಫಿಕ್ಸೆಲ್​ನ ಮ್ಯಾಕ್ರೊ ಲೆನ್ಸ್ ಮತ್ತು ಡೆಪ್ತ್ ಸೆನ್ಸಾಲ್ ನೀಡಲಾಗಿದೆ. ಇನ್ನು ಫ್ರಂಟ್‌ನಲ್ಲಿ ಸೆಲ್ಫಿಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮರೆ ಒದಗಿಸಿದೆ.

ಬರೋಬ್ಬರಿ 6,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಪ್ಯಾಕ್ ನೀಡಲಾಗಿದ್ದು, ಇದು 18W ಅತಿ ವೇಗದ ಫಾಸ್ಟ್ ಚಾರ್ಜಿಂಗ್ ಅನ್ನು ಮತ್ತು 9W ವರೆಗೆ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್‌ v5.1, GPS, FM ರೇಡಿಯೋ, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿ ಪ್ರಮುಖ ಆಯ್ಕೆಗಳನ್ನು ನೀಡಲಾಗಿದೆ.

WhatsApp: ವಾಟ್ಸ್ಆ್ಯಪ್​ನಲ್ಲಿ ಬರಲಿದೆ ಒಂದಲ್ಲಾ ಎರಡಲ್ಲ 7 ಹೊಸ ಫೀಚರ್ಸ್: ಯಾವುದೆಲ್ಲ ಗೊತ್ತಾ?

ರಷ್ಯಾದ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಲಿದೆ ಬಾಹ್ಯ ರೋಬೋಟ್

(Redmi 10 Prime 6000mAh Battery 50MP Camera first sale today via Amazon Price in India offers)