ರಷ್ಯಾದ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಲಿದೆ ಬಾಹ್ಯ ರೋಬೋಟ್

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಯಸ್ಸಾಗುತ್ತಿದ್ದು, ಈ ಕಾರ್ಯಕ್ರಮದಿಂದ ಹೊರಬಂದು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವುದು ರಷ್ಯಾದ ಉದ್ದೇಶ ಎಂಬುದು ಒತ್ತಿ ಹೇಳಿದ್ದಾರೆ.

ರಷ್ಯಾದ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಲಿದೆ ಬಾಹ್ಯ ರೋಬೋಟ್
ಸಾಂಕೇತಿಕ ಚಿತ್ರ
TV9kannada Web Team

| Edited By: Vinay Bhat

Sep 07, 2021 | 11:14 AM

ಬಾಹ್ಯಾಕಾಶ ಸಂಶೋಧನೆಯ ತನ್ನ ಸುವರ್ಣ ಯುಗಕ್ಕೆ ಮತ್ತೆ ಮರಳಲು ಬಯಸಿರುವ ರಷ್ಯಾ, 2025ರಲ್ಲಿ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಅದಾಗಲೆ ತನ್ನ ಕಾರ್ಯವನ್ನು ಆರಂಭಿಸಿದೆ. ಸದ್ಯ ರಷ್ಯಾದ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಬಳಕೆ ಮಾಡಿ ಬಹುತೇಕ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿದೆಯಂತೆ. ಜೊತೆಗೆ ಬಾಹ್ಯ ರೋಬೋಟ್‌ಗಳನ್ನು ಒಳಗೊಂಡಿದೆ ಎಂದು ರೋಸ್ಕೋಸ್ಮೋಸ್ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್ ಹೇಳಿದ್ದಾರೆ.

ಈ ಹೊಸ ತಾಣವು ಜೀಯಸ್ (Zeus) ಪರಮಾಣು ಚಾಲಿತ ಬಾಹ್ಯಾಕಾಶದ ಟಗ್ ಜೊತೆಯಲ್ಲಿ ಭವಿಷ್ಯದ ಅಂತರ್-ಗ್ರಹಗಳ ಹಾರಾಟದ ವ್ಯವಸ್ಥೆಗಳ ಮೂಲಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ. ಸದ್ಯಕ್ಕೆ ನಾವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಸ ಬಾಹ್ಯಾಕಾಶ ನಿಲ್ದಾಣವನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಯಸ್ಸಾಗುತ್ತಿದ್ದು, ಈ ಕಾರ್ಯಕ್ರಮದಿಂದ ಹೊರಬಂದು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವುದು ರಷ್ಯಾದ ಉದ್ದೇಶ ಎಂಬುದು ಒತ್ತಿ ಹೇಳಿದ್ದಾರೆ.

ರಷ್ಯಾ 2025ರಲ್ಲಿ ರಷ್ಯಾ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲಿರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಅಮೆರಿಕ ಚುರುಕಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಕುರಿತು ಮಾಹಿತಿಗಳನ್ನು ಪಡೆಯುತ್ತಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದ ಭವಿಷ್ಯದ ಕುರಿತು ಯೋಚಿಸಲು ಆರಂಭಿಸಿದೆ.

ರಷ್ಯಾ ಹೇಳುತ್ತಿರುವಂತೆ ಐಎಎಸ್‌ಎಸ್‌ಗೆ ನಿಜಕ್ಕೂ ವಯಸ್ಸಾಗುತ್ತಿದೆ. 1998ರಲ್ಲಿ ಕಾರ್ಯಾರಂಭ ಮಾಡಿದ ಐಎಸ್‌ಎಸ್‌ಗೆ ಇದೀಗ 23 ವರ್ಷಗಳಾಗಿದ್ದು, ಇಷ್ಟು ದೀರ್ಘ ಕಾಲ ಸೇವೆ ಸಲ್ಲಿಸಿರುವ ಐಎಸ್‌ಎಸ್‌ಗೆ ಆಧುನಿಕ ರೂಪ ನೀಡಲು ನಾಸಾ ಯೋಜನೆ ರೂಪಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS) ಎಂಬುದು ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದ್ದು, ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಸ್ಥಾಪಿಸಲಾಗಿದೆ. ಈ ನಿಲ್ದಾಣದ ನಿರ್ಮಾಣವನ್ನು 1998 ರಲ್ಲಿ ಪ್ರಾರಂಭಿಸಿ 2011ರಲ್ಲಿ ಪೂರ್ಣಗೊಳಿಸಲಾಯಿತು. ಅತ್ಯಂತ ದೊಡ್ಡ ಪಾರ್ಶ್ವಛೇದೀಯ ವ್ಯಾಪ್ತಿ ಹೊಂದಿರುವ ಐಎಸ್‌ಎಸ್‌ನ್ನು ಭೂಮಿಯಿಂದ ಬರಿಗಣ್ಣಿನಲ್ಲಿ ನೋಡಬಹುದಾಗಿದೆ.

Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ

ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿರುವವರನ್ನು ಪ್ರೇರೇಪಿಸಲು ಕಸ್ಟಮೈಸ್ಡ್ ಮರ್ಕಂಡೈಸ್ ಲಾಂಚ್ ಮಾಡಿದ ಇಸ್ರೋ

(Russias new space station to use AI robots)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada