Karnal Kisan Mahapanchayat ಕರ್ನಾಲ್ ತಲುಪಿದ ಹರ್ಯಾಣದ ರೈತರು; ಬೃಹತ್ ಪ್ರತಿಭಟನೆಗೆ ಮುನ್ನ ಎಸ್​​ಕೆಎಂ ಮುಖಂಡರನ್ನು ಚರ್ಚೆಗೆ ಕರೆದ ಜಿಲ್ಲಾಡಳಿತ

Farmers Protest: ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಲು ಅನಾಜ್ ಮಂಡಿಯಿಂದ ಮಿನಿ-ಸೆಕ್ರೆಟರಿಯೇಟ್ ವರೆಗೆ 3.5 ಕಿಮೀಗಳಷ್ಟು ಮೆರವಣಿಗೆ ನಡೆಸಲು ಯೋಜಿಸಿದ್ದಾರೆ. ಬೆಳಿಗ್ಗೆಯಿಂದಲೇ ಈ ಮಾರ್ಗದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Karnal Kisan Mahapanchayat ಕರ್ನಾಲ್ ತಲುಪಿದ ಹರ್ಯಾಣದ ರೈತರು; ಬೃಹತ್ ಪ್ರತಿಭಟನೆಗೆ ಮುನ್ನ ಎಸ್​​ಕೆಎಂ ಮುಖಂಡರನ್ನು ಚರ್ಚೆಗೆ ಕರೆದ ಜಿಲ್ಲಾಡಳಿತ
ಕರ್ನಾಲ್​​ನಲ್ಲಿ ಬಿಗಿ ಭದ್ರತೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 07, 2021 | 1:02 PM

ಕರ್ನಾಲ್: ಮಂಗಳವಾರ ಭಾರೀ ಮಳೆಯ ನಡುವೆಯೇ ಹರ್ಯಾಣದ ರೈತರು ಸಂಯುಕ್ತ ಕಿಸಾನ್ ಮೋರ್ಚಾದ ಮಿನಿ-ಸೆಕ್ರೆಟರಿಯೇಟ್‌ಗೆ ಘೇರಾವ್ ಕರೆ ಸ್ವೀಕರಿಸಿ ಕರ್ನಾಲ್ ತಲುಪಲು ಆರಂಭಿಸಿದ್ದಾರೆ. ಕರ್ನಾಲ್ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರತಿನಿಧಿಸುವ ಕ್ಷೇತ್ರವಾಗಿದೆ.  ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಲು ಅನಾಜ್ ಮಂಡಿಯಿಂದ ಮಿನಿ-ಸೆಕ್ರೆಟರಿಯೇಟ್ ವರೆಗೆ 3.5 ಕಿಮೀಗಳಷ್ಟು ಮೆರವಣಿಗೆ ನಡೆಸಲು ಯೋಜಿಸಿದ್ದಾರೆ. ಬೆಳಿಗ್ಗೆಯಿಂದಲೇ ಈ ಮಾರ್ಗದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹರ್ಯಾಣವು ಕರ್ನಾಲ್, ಕುರುಕ್ಷೇತ್ರ, ಕೈತಾಲ್, ಜಿಂದ್ ಮತ್ತು ಪಾಣಿಪತ್ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮಂಗಳವಾರ ಮಧ್ಯರಾತ್ರಿ 12:00 ರಿಂದ ಮಧ್ಯರಾತ್ರಿಯವರೆಗೆ 24 ಗಂಟೆಗಳ ನಂತರ (ರಾತ್ರಿ 11.59) ಸ್ಥಗಿತಗೊಳಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 10 ಕಂಪನಿಗಳು ಸೇರಿದಂತೆ 40 ಕಂಪನಿಗಳ ಭದ್ರತಾ ಪಡೆಗಳನ್ನು ಪಟ್ಟಣದಲ್ಲಿ ನಿಯೋಜಿಸಲಾಗಿದೆ. ಪರಿಸ್ಥಿತಿ ಉಲ್ಬಣಗೊಳ್ಳುವ ಬಗ್ಗೆ ಎಚ್ಚರವಹಿಸಿ ಕರ್ನಾಲ್ ಉಪ ಆಯುಕ್ತ ನಿಶಾಂತ್ ಕುಮಾರ್ ಯಾದವ್ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ಹೊರಡಿಸಿದ್ದಾರೆ. ಇದು ಐದು ಅಥವಾ ಹೆಚ್ಚಿನ ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸುತ್ತದೆ.

ವಾಹನ ಸವಾರರಿಗೆ, ವಿಶೇಷವಾಗಿ ಎನ್ಎಚ್ -44 (ಅಂಬಾಲಾ-ಹೊಸ ದೆಹಲಿ) ನಲ್ಲಿ ಪ್ರಯಾಣಿಸುವವರಿಗೆ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ.

ಇಂದಿನ ಪ್ರತಿಭಟನೆ ಮುಜಫರ್‌ನಗರ ಮಹಾಪಂಚಾಯತ್‌ನ ಒಂದು ದಿನದ ನಂತರ ನಡೆಯುತ್ತಿದೆ. ಅಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬಿಜೆಪಿ ವಿರುದ್ಧ ಪ್ರಚಾರಕ್ಕೆ ಕರೆ ನೀಡಿದ್ದರು.

ಚರ್ಚೆಗೆ ಸಿದ್ಧ ಎಂದ ರೈತರು ಇನ್ನೊಂದು ಬೆಳವಣಿಗೆಯಲ್ಲಿ ಕರ್ನಾಲ್ ಜಿಲ್ಲಾ ಆಡಳಿತವು ಎಸ್ ಕೆಎಂ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದೆ. ರೈತರು ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಆದ್ದರಿಂದ, ರೈತ ಮುಖಂಡರ 11 ಸದಸ್ಯರ ನಿಯೋಗವು ಶೀಘ್ರದಲ್ಲೇ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಿದೆ.

ರೈತರ ಬೇಡಿಕೆ ಏನು? ಸಂಯುಕ್ತ ಕಿಸಾನ್ ಮೋರ್ಚಾ ಆಗಸ್ಟ್ 30 ರಂದು ಸೆಕ್ರೆಟರಿಯೇಟ್ ಘೇರಾವ್ ಗೆ ಕರೆ ನೀಡಿತ್ತು, ಆಗಸ್ಟ್ 28 ರಂದು ಕರ್ನಾಲ್ ನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ವಿರುದ್ಧ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಲು ಆದೇಶಿಸಿದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿದರು.

ಸೋಮವಾರ ಹರ್ಯಾಣದ ಗೃಹ ಸಚಿವ ಅನಿಲ್ ವಿಜ್, “ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ನವದೀಪ್ ಸಿಂಗ್ ವಿರ್ಕ್ ಅವರು ಪರಿಸ್ಥಿತಿಯನ್ನು ನೋಡಿಕೊಳ್ಳಲು ಮತ್ತು ಕಾರ್ಯಕ್ರಮದ ಶಾಂತಿಯುತವಾಗಿ ನಡೆಯುವಂತೆ ಖಚಿತಪಡಿಸಿಕೊಳ್ಳಲು ಕರ್ನಾಲ್‌ನಲ್ಲಿ ಹಾಜರಿರುವಂತೆ ಆದೇಶಿಸಿದ್ದೇನೆ. ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ರೈತರಿಗೆ ನೀಡಿದ ವಿಡಿಯೊ ಸಂದೇಶದಲ್ಲಿ, ಹಿರಿಯ ಬಿಕೆಯು ನಾಯಕ ಗುರ್ನಾಮ್ ಸಿಂಗ್ ಚಾರುನಿ, “ಪೋಲಿಸ್ ಲಾಠಿಚಾರ್ಜ್ ನಂತರ ನಾವು ಒಂದು ದೊಡ್ಡ ಪಂಚಾಯತ್ ಮತ್ತು ಡಿಸಿ ಕಚೇರಿಗೆ ಘೇರಾವ್ ಮಾಡಲು ನಿರ್ಧರಿಸಿದ್ದೆವು. ಅದಕ್ಕಾಗಿ ನಾವು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕರ್ನಾಲ್ ಅನಾಜ್ ಮಂಡಿಯಲ್ಲಿ ಸೇರುತ್ತೇವೆ. ಅಲ್ಲಿ ನಾವು ಮುಂದಿನ ಕ್ರಮ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಎಸ್‌ಡಿಎಂ ಆಯುಷ್ ಸಿನ್ಹಾ ವಿರುದ್ಧ ಎಫ್‌ಐಆರ್ ದಾಖಲಿಸಲು ರೈತರು ಒತ್ತಾಯಿಸುತ್ತಿದ್ದಾರೆ. ಅವರು ಆಗಸ್ಟ್ 28 ರಂದು ಭದ್ರತಾ ವಲಯವನ್ನು ಉಲ್ಲಂಘಿಸುವವರ “ತಲೆಗೆ ಹೊಡೆಯಿರಿ” ಎಂದು ಸಿನ್ಹಾ ಪೊಲೀಸರಿಗೆ ಆದೇಶಿಸಿದ್ದರು.

ಕಿಸಾನ್ ಮಹಾಪಂಚಾಯತ್‌ : ಸಿದ್ಧತೆ ಹೇಗಿದೆ? ಇಂದು ಕಿಸಾನ್ ಮಹಾಪಂಚಾಯತ್‌ಗಾಗಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 10 ಕಂಪನಿಗಳು ಸೇರಿದಂತೆ 40 ಕಂಪನಿಗಳ ಭದ್ರತಾ ಪಡೆಗಳನ್ನು ಪಟ್ಟಣದಲ್ಲಿ ನಿಯೋಜಿಸಲಾಗಿದೆ ಮತ್ತು ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ರಾತ್ರಿಯವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಕುರುಕ್ಷೇತ್ರ, ಕೈತಾಲ್, ಜಿಂದ್ ಮತ್ತು ಪಾಣಿಪತ್​​ನಲ್ಲಿಯೂ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಪರಿಸ್ಥಿತಿ ಉಲ್ಬಣಗೊಳ್ಳುವ ಬಗ್ಗೆ ಎಚ್ಚರವಹಿಸಿ ಕರ್ನಾಲ್ ಉಪ ಆಯುಕ್ತ ನಿಶಾಂತ್ ಕುಮಾರ್ ಯಾದವ್ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ಹೊರಡಿಸಿದ್ದಾರೆ. ಇದು ಐದು ಅಥವಾ ಹೆಚ್ಚಿನ ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸುತ್ತದೆ.

ಹರ್ಯಾಣದ 5 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ ರೈತರ ಪ್ರತಿಭಟನೆಯ ದೃಷ್ಟಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹರ್ಯಾಣ ಸರ್ಕಾರವು ಕರ್ನಾಲ್, ಕುರುಕ್ಷೇತ್ರ, ಕೈತಾಲ್, ಜಿಂದ್ ಮತ್ತು ಪಾಣಿಪತ್ ಜಿಲ್ಲೆಗಳಲ್ಲಿ ಮಂಗಳವಾರ ಮಧ್ಯರಾತ್ರಿ 12:00 ರಿಂದ ಮಧ್ಯರಾತ್ರಿಯವರೆಗೆ (11.59 pm) ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಪ್ರತಿಭಟನಾ ನಿರತ ರೈತರು ಮಂಗಳವಾರ ಕರ್ನಾಲ್ ನಲ್ಲಿ ಮಿನಿ-ಸೆಕ್ರೆಟರಿಯೇಟ್ ಘೇರಾವ್ ಗೆ ಕರೆ ನೀಡಿದ್ದಾರೆ.

ವಾಹನ ಸವಾರರಿಗೆ, ವಿಶೇಷವಾಗಿ ಎನ್ಎಚ್ -44 (ಅಂಬಾಲಾ-ಹೊಸ ದೆಹಲಿ) ನಲ್ಲಿ ಪ್ರಯಾಣಿಸುವವರಿಗೆ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ. ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಭಂಗವನ್ನು ತಪ್ಪಿಸಲು ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Kisan Mahapanchayat: ಕರ್ನಾಲ್​​ನಲ್ಲಿ ರೈತರ ಸಮಾವೇಶಕ್ಕೆ ವೇದಿಕೆ ಸಜ್ಜು, ಬಿಗಿ ಭದ್ರತೆ

(Karnal Kisan Mahapanchayat Samyukt Kisan Morcha’s call to gherao mini-secretariat Haryana farmers reach Karnal)

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ