ಮದ್ದೂರು ತಾಲ್ಲೂಕಿನ ಈ ನಾಯಿ ಚಿರತೆಯೊಂದಿಗೆ ಕಾದಾಡಿ ವನ್ಯಜೀವಿಯೇ ಹೆದರಿ ಪಲಾಯನಗೈಯುವಂತೆ ಮಾಡಿತು!!
ನಾಯಿ ಚಿರತೆಯೊಂದಿಗೆ ಸಮಬಲದ ಹೋರಾಟ ನಡೆಸಿದ್ದೂ ಅಲ್ಲದೆ ಹಿಂಸ್ರಪಶು ಪಲಾಯನಗೈಯುವಂತೆ ಮಾಡುತ್ತದೆ.
ಮಂಡ್ಯ: ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮದ್ದೂರು ತಾಲ್ಲೂಕಿನ ಹೊನ್ನಲಗೆರೆ ಗ್ರಾಮಕ್ಕೆ ನುಗ್ಗಿದ ಚಿರತೆಯೊಂದು ಶಿವರಾಜ್ ಎನ್ನುವವರು ತಮ್ಮ ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯ ಮೇಲೆ ದಾಳಿ ಮಾಡಿದೆ. ಆದರೆ ಶಿವರಾಜ್ ಅವರ ನಾಯಿ ಭಾರಿ ಘಾಟಿ ಮತ್ತು ಧೈರ್ಯಶಾಲಿ. ಚಿರತೆಯೊಂದಿಗೆ ಸಮಬಲದ ಹೋರಾಟ ನಡೆಸಿದ್ದೂ ಅಲ್ಲದೆ ಹಿಂಸ್ರಪಶು ಬಾಲಮುದುರಿಕೊಂಡು ಪಲಾಯನಗೈಯುವಂತೆ ಮಾಡುತ್ತದೆ. ಅವುಗಳ ನಡುವೆ ರಾತ್ರಿಯ ಮಂದಬೆಳಕಲ್ಲಿ ನಡೆಯುವ ಕಾದಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Published on: Oct 21, 2022 11:43 AM