ಮೈಸೂರು ಜಿಲ್ಲೆ ಉಸ್ತುವಾರಿಯನ್ನು ಜಿಟಿಡಿಗೆ ವಹಿಸಿಕೊಟ್ಟಿದ್ದೇನೆ, ಅವರ ನಾಯಕತ್ವ ಇಷ್ಟವಿಲ್ಲದವರು ಪಕ್ಷಬಿಟ್ಟು ಹೋಗಬಹುದು: ಹೆಚ್ ಡಿ ದೇವೇಗೌಡ
ಜಿಟಿಡಿ ಅವರ ನಾಯಕತ್ವ ಇಷ್ಟವಿಲ್ಲದವರು ಪಕ್ಷದಿಂದ ಹೊರಹೋಗಬಹುದು. ಜಿಲ್ಲೆಯ ಉಸ್ತುವಾರಿಯನ್ನು ಜಿಟಿಡಿಗೆ ವಹಿಸಿಕೊಟ್ಟಿದ್ದೇನೆ, ಎಂದು ದೇವೇಗೌಡ ಹೇಳಿದರು.
ಮೈಸೂರು: ನಿನ್ನೆವರೆಗೆ ಜೆಡಿಎಸ್ ಪಕ್ಷಕ್ಕೆ ಮಗ್ಗಲು ಮುಳ್ಳಾಗಿದ್ದ ಮೈಸೂರು ಭಾಗದ ಪ್ರಬಲ ನಾಯಕ ಜಿಟಿ ದೇವೇಗೌಡ (GT Devegowda) ಅವರ ಮನೆಗೆ ಗುರುವಾರ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ (HD Devegowda) ಭೇಟಿ ನೀಡಿದ ಬಳಿಕ ಅವರ ಖದರೇ ಬೇರೆಯಾಗಿದೆ. ಪಕ್ಷದಿಂದ ಹೊರಹೋಗಲು ಹೊಸ್ತಿಲಲ್ಲಿ ನಿಂತಿದ್ದ ಜಿಟಿಡಿ ಅವರ ಪರವಾಗಿ ಮೈಸೂರಲ್ಲಿ ಇಂದು ಮಾತಾಡಿದ ದೇವೇಗೌಡರು, ಮೈಸೂರು ಭಾಗದ (Mysuru region) ಪಕ್ಷದ ಕಾರ್ಯಕರ್ತರು ಜಿಟಿಡಿ ನಾಯಕತ್ವದ ವಿರುದ್ದ ಯಾರೂ ಚಕಾರವೆತ್ತಕೂಡದು. ಅವರ ನಾಯಕತ್ವ ಇಷ್ಟವಿಲ್ಲದವರು ಪಕ್ಷದಿಂದ ಹೊರಹೋಗಬಹುದು. ಜಿಲ್ಲೆಯ ಉಸ್ತುವಾರಿಯನ್ನು ಜಿಟಿಡಿಗೆ ವಹಿಸಿಕೊಟ್ಟಿದ್ದೇನೆ, ಎಂದು ದೇವೇಗೌಡ ಹೇಳಿದರು.
Latest Videos