ನಾನು ಪುನಃ ಚಾಮುಂಡೇಶ್ವರಿಯಿಂದ ಸ್ಪರ್ಧಿಸುತ್ತೇನೆ, ನನ್ನ ಮಗನಿಗೆ ಹುಣಸೂರು ಕ್ಷೇತ್ರ ಸೂಚಿಸಿದ್ದಾರೆ: ಜಿಟಿ ದೇವೇಗೌಡ
ಜಿಲ್ಲೆಯ ಮತಕ್ಷೇತ್ರಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಒಂದು ಸಂಭವನೀಯ ಪಟ್ಟಿಯನ್ನು ಜಿಟಿಡಿ ಮೈಸೂರಲ್ಲಿ ಮಾಧ್ಯಮದವರ ಮುಂದೆ ಪ್ರಕಟಿಸಿದರು.
ಮೈಸೂರು: ಪಕ್ಷದ ನಾಯಕತ್ವ ತನಗೆ ಮೈಸೂರು ಜಿಲ್ಲೆಯ ಉಸ್ತುವಾರಿ ವಹಿಸಿಕೊಡುತ್ತಿದ್ದಂತೆಯೇ ಜಿಟಿ ದೇವೇಗೌಡ ಮೈಮೇಲಿನ ಧೂಳು ಕೊಡವಿಕೊಂಡು 2023 ವಿಧಾನ ಸಭಾ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆ. ಜಿಲ್ಲೆಯ ಮತಕ್ಷೇತ್ರಗಳ ಅಭ್ಯರ್ಥಿಗಳ ಒಂದು ಸಂಭವನೀಯ ಪಟ್ಟಿಯನ್ನು ಮೈಸೂರಲ್ಲಿ ಮಾಧ್ಯಮದವರ ಮುಂದೆ ಪ್ರಕಟಿಸಿದರು. ಜಿಟಿಡಿ ಮತ್ತೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ಮಗ ಹರೀಶ್ ಗೌಡ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಂತೆ. ಕೆ ಆರ್ ನಗರದಿಂದ ಸಾ ರಾ ಮಹೇಶ್, ಟಿ ನರಸೀಪುರದಿಂದ ಅಶ್ವಿನ್, ಪಿರಿಯಾಪಟ್ಟಣದಿಂದ ಮಹಾದೇವ ಮತ್ತು ಹೆಚ್ ಡಿ ಕೋಟೆಯಿಂದ ಸಿದ್ದಣ್ಣ ಇಲ್ಲವೇ ಅವರ ಮಗ ಸ್ಪರ್ಧಿಸಲಿದ್ದಾರೆಂದು ಜಿಟಿಡಿ ಹೇಳಿದರು.
Latest Videos