ಕೊಲೆ ಪ್ರಕರಣದ ಆರೋಪಿ ದರ್ಶನ್ ಶಿಫ್ಟ್ ಆಗಲಿರುವ ಖ್ಯಾತ ಬಳ್ಳಾರಿ ಸೆಂಟ್ರಲ್ ಜೈಲಿನ ಕಿರು ಪರಿಚಯ
ಜಾಸ್ತಿ ಕಿಚಾಯಿಸಿದರೆ ಬಳ್ಳಾರಿ ಜೈಲಿಗೆ ಹಾಕ್ತೀನಿ ಅಂತ ಪೊಲೀಸರು ಅಪರಾಧಿಗಳನ್ನು ಹೆದರಿಸುವಷ್ಟು ಖ್ಯಾತಿ ಬಳ್ಳಾರಿ ಜೈಲಿನದ್ದು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಜೈಲಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಕುಖ್ಯಾತ ರೌಡಿಗಳನ್ನು ಇಲ್ಲಿಗೆ ಶಿಫ್ಟ್ ಮಾಡುವ ಪರಿಪಾಠ ಶುರುವಾಯಿತು.
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿತ್ರನಟ ದರ್ಶನ್ ರನ್ನು ಬರಮಾಡಿಕೊಳ್ಳಲು ಖ್ಯಾತ ಬಳ್ಳಾರಿ ಸೆಂಟ್ರಲ್ ಜೈಲು ತಯಾರಾಗಿದೆ. ಮಾಡಿದ್ದುಣ್ಣೋ ಮಾರಾಯ ಅಂತಾರಲ್ಲ ಅನ್ನುವ ಹಾಗೆ ಬೆಂಗಳೂರಿನ ಕೇಂದ್ರೀಯ ಕಾರಾಗೃಹದಲ್ಲಿ ಮಾಡಿದ್ದಕ್ಕಿಂತ ಜಾಸ್ತಿಯೇ ಉಣತೊಡಗಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಬಳ್ಳಾರಿ ಜೈಲಿನ ಬಗ್ಗೆ ನಮ್ಮ ವರದಿಗಾರನ ಮಾಹಿತಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ಗೆ ಆತಿಥ್ಯ ಕೊಡಲು ರೌಡಿಗಳ ಮಧ್ಯೆ ಸ್ಪರ್ಧೆ; ಕಂಟಕ ಎದುರಾಗಿದ್ದು ಮಾತ್ರ ದಾಸನಿಗೆ
Latest Videos