ದರ್ಶನ್ಗೆ ಆತಿಥ್ಯ ಕೊಡಲು ರೌಡಿಗಳ ಮಧ್ಯೆ ಸ್ಪರ್ಧೆ; ಕಂಟಕ ಎದುರಾಗಿದ್ದು ಮಾತ್ರ ದಾಸನಿಗೆ
ನಟ ದರ್ಶನ್ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಇಂದು (ಆಗಸ್ಟ್ 28) ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಆಗಿದ್ದು ಇಬ್ಬರು ಪ್ರಮುಖರು.
ನಟ ದರ್ಶನ್ ಅವರು ಈಗ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಬೆಂಗಳೂರಿನ ವಾತಾವರಣದಿಂದ ದರ್ಶನ್ ಹಾಯಾಗಿ ಇದ್ದರು. ಈಗ ಅವರು ಅನಿವಾರ್ಯವಾಗಿ ಬಳ್ಳಾರಿಗೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಇಬ್ಬರು ರೌಡಿಗಳ ಸ್ಪರ್ಧೆಯಿಂದ ದರ್ಶನ್ ಸಂಕಷ್ಟ ಅನುಭವಿಸಿದ್ದಾರೆ ಅನ್ನೋ ವಿಚಾರ ಗೊತ್ತೇ? ದರ್ಶನ್ಗೆ ಆತಿಥ್ಯ ಕೊಡುವ ವಿಚಾರದಲ್ಲಿ ಜೈಲಿನಲ್ಲಿರುವ ಬೇಕರಿ ರಘು ಹಾಗೂ ವಿಲ್ಸನ್ ಗಾರ್ಡನ್ ನಾಗ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ನಾಗನ ಉಪಚಾರ ದರ್ಶನ್ಗೆ ಇಷ್ಟ ಆಗಿತ್ತು. ಹೀಗಾಗಿ, ನಾಗನ ಬಳಿ ದರ್ಶನ್ ಹೆಚ್ಚು ಸಮಯ ಕಳೆಯಲು ಆರಂಭಿಸಿದರು. ಇದರಿಂದ ಸಿಟ್ಟಾದ ರಘು ಫೋಟೋ ವೈರಲ್ ಮಾಡಿದ್ದ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Wed, 28 August 24