ಅಯ್ಯೋ ವಿಧಿಯೇ! ಮಿರರ್‌ಗೆ ಟಚ್‌ ಆಗಿದ್ದಕ್ಕೆ ಕಾರಿನಿಂದ ಗುದ್ದಿ ಬೈಕ್‌ ಸವಾರನ ಕೊಂದೇ ಬಿಟ್ರು!

Updated on: Oct 29, 2025 | 4:09 PM

ಜಸ್ಟ್​ ಮಿರರ್​​​ಗೆ ಟಚ್ ಆಗಿದ್ದಕ್ಕೆ ಕಾರಿನವರು ಬೆನ್ನಟ್ಟಿ ಹಿಂದಿನಿನಿಂದ ಬೈಕ್ ಗೆ ಗುದ್ದಿ ಸವಾರನನ್ನು ಸಾಯಿಸಿರುವ ಘಟನೆ ಬೆಂಗಳೂರಿನ​ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೌದು.. ಕಾರಿನ ಮಿರರ್‌ಗೆ ಬೈಕ್‌ ಟಚ್ ಆಗಿದ್ದಕ್ಕೆ ಕೋಪಗೊಂಡ ದಂಪತಿ, ಬೆನ್ನಟ್ಟಿ ಹಿಂದಿನಿಂದ ಬೈಕ್‌ಗೆ ಗುದ್ದಿದ್ದಾರೆ.ಪರಿಣಾಮ ಬೈಕ್ ಸವಾರ ದರ್ಶನ್ ಎಂಬ ಯುವಕ ಮೃತಪಟ್ಟಿದ್ದಾನೆ. ಮತ್ತೋರ್ವ ವರುಣ್ ಎಂಬಾತ ಗಾಯಗೊಂಡಿದ್ದಾನೆ.

ಬೆಂಗಳೂರು, (ಅಕ್ಟೋಬರ್.29): ಜಸ್ಟ್​ ಮಿರರ್​​​ಗೆ ಟಚ್ ಆಗಿದ್ದಕ್ಕೆ ಕಾರಿನವರು ಬೆನ್ನಟ್ಟಿ ಹಿಂದಿನಿನಿಂದ ಬೈಕ್ ಗೆ ಗುದ್ದಿ ಸವಾರನನ್ನು ಸಾಯಿಸಿರುವ ಘಟನೆ ಬೆಂಗಳೂರಿನ​ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೌದು.. ಕಾರಿನ ಮಿರರ್‌ಗೆ ಬೈಕ್‌ ಟಚ್ ಆಗಿದ್ದಕ್ಕೆ ಕೋಪಗೊಂಡ ದಂಪತಿ, ಬೆನ್ನಟ್ಟಿ ಹಿಂದಿನಿಂದ ಬೈಕ್‌ಗೆ ಗುದ್ದಿದ್ದಾರೆ.ಪರಿಣಾಮ ಬೈಕ್ ಸವಾರ ದರ್ಶನ್ ಎಂಬ ಯುವಕ ಮೃತಪಟ್ಟಿದ್ದಾನೆ. ಮತ್ತೋರ್ವ ವರುಣ್ ಎಂಬಾತ ಗಾಯಗೊಂಡಿದ್ದಾನೆ.

ಅಕ್ಟೋಬರ್ 25ರ ರಾತ್ರಿ ಶ್ರೀರಾಮ ಲೇಔಟ್‌ನಲ್ಲಿ ಘಟನೆ ನಡೆದಿದೆ. ದರ್ಶನ್ ಮತ್ತು ವರುಣ್ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರಿನ ಮಿರರ್‌ಗೆ ಟಚ್‌ ಆಗಿದೆ. ಈ ವೇಳೆ ಮಿರರ್‌ ಒಡೆದಿದ್ದು, ಕಾರಿನಲ್ಲಿದ್ದ ಮನೋಜ್ ಕುಮಾರ್ ಮತ್ತು ಆರತಿ ಶರ್ಮ ದಂಪತಿ ಕೋಪಗೊಂಡು, ಸುಮಾರು ಎರಡು ಕಿಲೋಮೀಟರ್‌ನಷ್ಟು ಹಿಂಬಾಲಿಸಿ ಬೈಕ್‌ಗೆ ಗುದ್ದಿದ್ದಾರೆ ಎಂದು ತಿಳಿದುಬಂದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗುರುಳಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ದರ್ಶನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಜೆಪಿ ನಗರ ಸಂಚಾರ ಪೊಲೀಸ್ ಠಾಣೆಯ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.