ಬೆಳಗಾವಿಯಲ್ಲಿ ಮಹಿಳೆಯರಿಗೆ ಮಹಾಮೋಸ: ಕೋಟಿ ಕೋಟಿ ಹಣ ಪಡೆದು ಆರೋಪಿ ಜೂಟ್
ಬೆಳಗಾವಿಯಲ್ಲಿ ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಕೋಳೇಕರ್ ಎಂಬಾತ ಹಲವಾರು ಮಹಿಳೆಯರಿಗೆ ಒಟ್ಟು 12 ಕೋಟಿ ರೂ. ವಂಚಿಸಿದ್ದಾನೆ. ಗೃಹಲಕ್ಷ್ಮಿ ಫಲಾನುಭವಿಗಳನ್ನು ಗುರಿಯಾಗಿಸಿಕೊಂಡು, ಅಗರಬತ್ತಿ ಪ್ಯಾಕಿಂಗ್ ಕೆಲಸ ನೀಡುವುದಾಗಿ ನಂಬಿಸಿ ಐಡಿ ಕಾರ್ಡ್‌ಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾನೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ವಿಶೇಷ ತಂಡ ರಚಿಸಲಾಗಿದೆ.
ಬೆಳಗಾವಿ, ಅಕ್ಟೋಬರ್ 29: ಲೂಸ್ ಅಗರಬತ್ತಿ ಪ್ಯಾಕ್ ಮಾಡಲು ಹೇಳಿ ನೂರಾರು ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಮಹಿಳಾ ಗೃಹ ಉದ್ಯೋಗ ಸಮೂಹ ಬೆಳಗಾವಿ ಎಂಬ ಸಂಘದಿಂದ ವಂಚನೆ ಮಾಡಲಾಗಿದ್ದು, ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಕೋಳೆಕರ್ ವಿರುದ್ಧ ಆರೋಪ ಕೇಳಿಬಂದಿದೆ. ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಲಾಗಿದ್ದು, ಐಡಿ ಕಾರ್ಡ್ ಮಾಡಲು ಮಹಿಳೆಯರಿಂದ 2500 ರೂ. ವಸೂಲಿ ಮಾಡಲಾಗಿತ್ತು. ಒಂದೊಂದು ಐಡಿ ಕಾರ್ಡ್ಗೆ 3 ಸಾವಿರ ನೀಡುತ್ತೇವೆಂದು ಆಮಿಷ ತೋರಿಸಲಾಗಿತ್ತು. ಹೀಗಾಗಿ ಒಬೊಬ್ಬರು ತಲಾ 20ರಿಂದ 30 ಐಡಿ ಕಾರ್ಡ್ ಖರೀದಿಸಿದ್ದರು. ಸುಮಾರು 12 ಕೋಟಿಗೂ ಅಧಿಕ ಹಣ ಪಡೆದು ಆರೋಪಿ ಎಸ್ಕೇಪ್ ಆಗಿದ್ದು, ವಂಚನೆಗೊಳಗಾದ ಮಹಿಳೆಯರು ನ್ಯಾಯ ಕೊಡಿಸಬೇಕೆಂದು ಡಿಸಿ, ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 3:31 pm, Wed, 29 October 25



