ಯಾದಗಿರಿಯ ಸಮುದಾಯ ಆರೋಗ್ಯ ಕೇಂದ್ರವೊಂದು ಸತ್ತ ವ್ಯಕ್ತಿಗೂ ಬೂಸ್ಟರ್ ಡೋಸ್ ಯಶಸ್ವೀ ಅಂತ ಮೆಸೇಜ್ ಕಳಿಸಿದೆ
ಅದರರ್ಥ ದೋರನಹಳ್ಳಿ ಸಮುದಾಯ ಕೇಂದ್ರದ ಸಿಬ್ಬಂದಿ ಬದುಕಿರದ ಜನರಿಗೂ ಲಸಿಕೆ ನೀಡಿದ ಹಾಗೆ ದಾಖಲೆ ತೋರಿಸಿ ಲಸಿಕೆ ವಿಷಯದಲ್ಲಿ ಟಾರ್ಗೆಟ್ ಸಾಧಿಸಿರುವುದನ್ನು ಕೊಚ್ಚಿಕೊಳ್ಳುತ್ತಿದ್ದಾರೆ!
Yadgir: ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಯುವಕನ ಹೆಸರು ವಿಶಾಲ್ ಶಿಂಧೆ (Vishal Shindhe). ಯಾದಗಿರಿ ಜಿಲ್ಲೆಯ ದೋರನಹಳ್ಳಿಯ (Dornahalli) ನಿವಾಸಿ. ಇವರ ಹಿಂಭಾಗದಲ್ಲಿ ದೋರನಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ (community health centre) ನಿಮಗೆ ಕಾಣಿಸುತ್ತದೆ. ಇದೇ ಅರೋಗ್ಯ ಕೇಂದ್ರದಿಂದ ಒಂದು ಎಡವಟ್ಟು ನಡೆದಿದೆ ಎಂದು ವಿಶಾಲ್ ಹೇಳುತ್ತಿದ್ದಾರೆ. ಇವರ ಕೈಯಲ್ಲಿರುವ ಫೋನಿಗೆ ಒಂದು ಮೆಸೇಜ್ ಬಂದಿರುವುದನ್ನು ಅವರ ಕೆಮೆರಾಗೆ ತೋರಿಸುತ್ತಿದ್ದಾರೆ. ಕೊವಿನ್ ಌಪ್ ನಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇವರಿಗೆ ಮೆಸೇಜು ಬಂದಿರುವುದನ್ನು ಅವರು ನೋಡಲು ಹೇಳುತ್ತಿದ್ದಾರೆ. ಮೆಸೇಜಿನ ಪ್ರಕಾರ ವಿಶಾಲ ಅವರ ತಂದೆ ಮುರಾರಿ ರಾವ್ ಶಿಂಧೆ ಅವರಿಗೆ ಮೇ 10 ರಂದು ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡಲಾಗಿದೆ. ಅವರ ಎಲ್ಲ ಡೋಸ್ ಗಳನ್ನು ಯಶಸ್ವೀಯಾಗಿ ಪೂರೈಸಿದ್ದಾರೆ ಅಂತ ಸಂದೇಶ ಹೇಳುತ್ತದೆ.
ಅದರಲ್ಲಿ ಸೋಜಿಗ ಹುಟ್ಟಿಸವಂಥದ್ದೇನಿದೆ ಅನ್ನೋದು ನಿಮ್ಮ ಪ್ರಶ್ನೆ ಮತ್ತು ಗೊಂದಲವಾಗಿರಬಹುದು. ಸೋಜಿಗಪಡುವಂಥದ್ದು ಇದೆ ಮಾರಾಯ್ರೇ. ವಿಶಾಲ ತಂದೆ ಮುರಾರಿ ರಾವ್ ಶಿಂಧೆ ಕಳೆದ ವರ್ಷವೇ ಕೋವಿಡ್-19 ಮಹಾಮಾರಿಗೆ ಬಲಿಯಾಗಿದ್ದಾರೆ. ಅವರು ನಿಧನ ಹೊಂದಿ ಒಂದು ಮೇಲಾಗಿದೆ ಅಂತ ವಿಶಾಲ ಹೇಳುತ್ತಾರೆ. ಅದರರ್ಥ ದೋರನಹಳ್ಳಿ ಸಮುದಾಯ ಕೇಂದ್ರದ ಸಿಬ್ಬಂದಿ ಬದುಕಿರದ ಜನರಿಗೂ ಲಸಿಕೆ ನೀಡಿದ ಹಾಗೆ ದಾಖಲೆ ತೋರಿಸಿ ಲಸಿಕೆ ವಿಷಯದಲ್ಲಿ ಟಾರ್ಗೆಟ್ ಸಾಧಿಸಿರುವುದನ್ನು ಕೊಚ್ಚಿಕೊಳ್ಳುತ್ತಿದ್ದಾರೆ!
ಪ್ರಾಯಶಃ ಇದು ಬೇರೆ ಕಡೆಗಳಲ್ಲೂ ನಡೆಯುತ್ತಿರಬಹುದು. ಭಾರತದ ಎಲ್ಲ ಅರ್ಹ ನಾಗರಿಕರಿಗೆ ಲಸಿಕಾಕರಣ ಆಗಿದೆ ಅಂತ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವ ನಮ್ಮ ಕಣ್ಣೆದುರಿಗಿದೆ. ಲಸಿಕೆಗೆ ಸಂಬಂಧಿಸಿದಂತೆ ಆರೋಗ್ಯ ಸಿಬ್ಬಂದಿಯ ಒತ್ತಡ ಹೆಚ್ಚುತ್ತಿರುವುದರಿಂದ ಹೀಗಾಗುತ್ತಿದೆಯೇ?
ಇದನ್ನೂ ಓದಿ: ಕೋವಿಡ್ ಲಸಿಕೆ ಅಭಿಯಾನದಡಿ ಭಾರತ ಮಾಡಿರುವ ಸಾಧನೆಯನ್ನು ಇಡೀ ವಿಶ್ವ ಬೆರಗುಗಣ್ಣುಗಳಿಂದ ನೋಡುತ್ತಿದೆ!!