ಚಾಮುಂಡೇಶ್ವರಿ ತಪ್ಪಲಿನಲ್ಲಿ ಮೃತ ಕೋತಿ ಮರಿ ಅಂತ್ಯಕ್ರಿಯೆ ಮಾಡಿ ಮಾನವೀಯತೆ

| Updated By: ಸಾಧು ಶ್ರೀನಾಥ್​

Updated on: Nov 17, 2023 | 5:57 PM

ಕೋತಿ ಮರಿ ಮೃತಪಟ್ಟ ಜಾಗದಲ್ಲೇ ಗುಂಡಿ ತೆಗೆದು ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ನಡೆಸುವಾಗ ಸುತ್ತಲೂ ಕೋತಿಗಳ ದಂಡು ನೆರೆದಿತ್ತು. ಮೌನವಾಗಿ ಮರಗಳ ಮೇಲೆ ಕುಳಿತು ಅಂತ್ಯಕ್ರಿಯೆ ವೀಕ್ಷಣೆಯಲ್ಲಿ ತೊಡಗಿದ್ದವು.

ಮೈಸೂರಿನಲ್ಲಿಂದು ಮೃತ ಕೋತಿಮರಿಯ ಅಂತ್ಯಕ್ರಿಯೆಯನ್ನು ಮಾಡಿ ಮಾನವೀಯತೆ ಮೆರೆಯಲಾಗಿದೆ. ನಾಡದೇವಿ ತಾಯಿ ಚಾಮುಂಡೇಶ್ವರಿ ತಪ್ಪಲಿನಲ್ಲಿ ಈ ಘಟನೆ ನಡೆದಿದೆ. ಆಕಸ್ಮಿಕ ಘಟನೆಯಲ್ಲಿ ಮೃತಪಟ್ಟ ಕೋತಿಮರಿಗೆ ಚಾಮುಂಡಿ ಬೆಟ್ಟ ಹತ್ತುವ ಭಕ್ತರು, ಎರಡು ದಿನಗಳ ಹಿಂದೆ ಮೃತಪಟ್ಟಿದ್ದ ಕೋತಿ ಮರಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮರಿಯನ್ನು ಮಡಿಲಿನಲ್ಲಿ ಇಟ್ಟುಕೊಂಡಿದ್ದ ತಾಯಿ,  ಇಂದು ಮುಂಜಾನೆ ಸತ್ತ ಮರಿಯನ್ನು ಬಿಟ್ಟಿದೆ. ಅನಾಥವಾಗಿ ಬಿದ್ದಿದ್ದ ಮರಿಯ ಅಂತ್ಯಕ್ರಿಯೆಯನ್ನು ಭಕ್ತರು ನೆರವೆರಿಸಿದ್ದಾರೆ.

ಕೋತಿ ಮರಿ ಮೃತಪಟ್ಟ ಜಾಗದಲ್ಲೇ ಗುಂಡಿ ತೆಗೆದು ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ನಡೆಸುವಾಗ ಸುತ್ತಲೂ ಕೋತಿಗಳ ದಂಡು ನೆರೆದಿತ್ತು. ಮೌನವಾಗಿ ಮರಗಳ ಮೇಲೆ ಕುಳಿತು ಅಂತ್ಯಕ್ರಿಯೆ ವೀಕ್ಷಣೆಯಲ್ಲಿ ತೊಡಗಿದ್ದವು. ಆ ನಂತರವೂ ಕೆಲವು ಕೋತಿಗಳು ಸಮಾಧಿ ಸ್ಥಳಕ್ಕೆ ಬಂದು ನೋಡಿಕೊಂಡು ಹೋಗಿವೆ. ಒಟ್ಟಿನಲ್ಲಿ ಕೋತಿ ಮರಿ ಅಂತ್ಯಕ್ರಿಯೆ ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ.

ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow us on