ಜಾತಿ ನಿಂದನೆ ಮಾಡಿದ ಆರೋಪ: ತನಿಶಾ ಕುಪ್ಪಂಡ ವಿಚಾರಣೆಗಾಗಿ ಬಿಗ್​ ಬಾಸ್​ ಮನೆಗೆ ಬಂದ ಪೊಲೀಸರು

ಜಾತಿ ನಿಂದನೆ ಮಾಡಿದ ಆರೋಪ: ತನಿಶಾ ಕುಪ್ಪಂಡ ವಿಚಾರಣೆಗಾಗಿ ಬಿಗ್​ ಬಾಸ್​ ಮನೆಗೆ ಬಂದ ಪೊಲೀಸರು

ಮದನ್​ ಕುಮಾರ್​
|

Updated on: Nov 17, 2023 | 6:52 PM

ಮಾತಿನ ಭರದಲ್ಲಿ ಬಳಸಿದ ಒಂದು ಪದದಿಂದ ತನಿಶಾ ಕುಪ್ಪಂಡ ಅವರು ತೊಂದರೆಗೆ ಸಿಲುಕಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದೂರು ದಾಖಲಾಗಿತ್ತು. ಈಗ ಅವರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ನಡೆಯುತ್ತಿರುವ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.

ನಟಿ ತನಿಶಾ ಕುಪ್ಪಂಡ (Tanisha Kuppanda) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅವರು ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಮಾತಿನ ಭರದಲ್ಲಿ ಅವರು ಬಳಸಿದ ಒಂದು ಪದದಿಂದ ಅವರು ತೊಂದರೆಗೆ ಸಿಲುಕಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಶಾ ಕುಪ್ಪಂಡ ವಿರುದ್ಧ ದೂರು ದಾಖಲಾಗಿತ್ತು. ಈಗ ಅವರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ನಡೆಯುತ್ತಿರುವ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡರೆ ತನಿಶಾ ಕುಪ್ಪಂಡ ಅವರು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಆಗ ಅವರ ಬಿಗ್​ ಬಾಸ್​ ಆಟ ಅರ್ಧಕ್ಕೆ ನಿಲ್ಲಲಿದೆ. ಈ ಮೊದಲು ವರ್ತೂರು ಸಂತೋಷ್​ ಅವರಿಗೂ ಇದೇ ರೀತಿ ಆಗಿತ್ತು. ಹುಲಿ ಉಗುರಿನ ಲಾಕೆಟ್​ ಧರಿಸಿದ ಆರೋಪದಲ್ಲಿ ಅವರು ಅರೆಸ್ಟ್​ ಆಗಿ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಬಂದ ಅವರು ಮತ್ತೆ ಬಿಗ್​ ಬಾಸ್​ (BBK 10) ಆಟ ಮುಂದುವರಿಸಿದರು. ತನಿಶಾ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.