ಹುಬ್ಬಳ್ಳಿ: ನನ್ನ ಮಕ್ಕಳನ್ನು ಗುಂಡಿಟ್ಟು ಸಾಯಿಸಿಬಿಡಿ ಅಂತ ಪೊಲೀಸ್ ಕಮೀಶನರ್ ಮುಂದೆ ಗೋಗರೆದ ಹತಾಶ ತಂದೆ!

ಹುಬ್ಬಳ್ಳಿ: ನನ್ನ ಮಕ್ಕಳನ್ನು ಗುಂಡಿಟ್ಟು ಸಾಯಿಸಿಬಿಡಿ ಅಂತ ಪೊಲೀಸ್ ಕಮೀಶನರ್ ಮುಂದೆ ಗೋಗರೆದ ಹತಾಶ ತಂದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2024 | 11:43 AM

ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮೀಶನರ್ ಆಗಿರುವ ಎನ್ ಶಶಿಕುಮಾರ್ ಮಾನವೀಯ ಸಂವೇದನೆಯುಳ್ಳ ಒಬ್ಬ ದಕ್ಷ ಅಧಿಕಾರಿ. ತಾವು ಸೇವೆ ಸಲ್ಲಿಸಿದ ಎಲ್ಲ ಭಾಗಗಳಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಬ್ಬರು ಯುವತಿಯರ ಕೊಲೆ ನಡೆದು ಪೊಲೀಸ್ ವ್ಯವಸ್ಥೆಯ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಿದಾಗ ಸರ್ಕಾರ ಶಶಿಕುಮಾರ್ ಅವರನ್ನು ಇಲ್ಲಿಗೆ ಟ್ರಾನ್ಸ್ ಫರ್ ಮಾಡಿದೆ.

ಹುಬ್ಬಳ್ಳಿ: ನನ್ನ ಮಕ್ಕಳಿಬ್ಬರೂ ದಾರಿ ತಪ್ಪಿದ್ದಾರೆ, ಅವರನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ ಸಂಪೂರ್ಣವಾಗಿ ಸೋತು ಅಸಹಾಯಕನಾಗಿದ್ದೇನೆ, ಹತಾಶನಾಗಿದ್ದೇನೆ, ಇಬ್ಬರನ್ನೂ ಗುಂಡಿಟ್ಟು ಸಾಯಿಸಿಬಿಡಿ ಸರ್…..ಅಂತ ಯಾವ ತಂದೆಯಾದರೂ ಪೊಲೀಸ್ ಅಧಿಕಾರಿಗಳ ಮುಂದೆ ಗೋಗರೆದಾನೆಯೇ? ಹುಬ್ಬಳ್ಳಿ ಕಸಾಬಪೇಟೆ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿರುವ ಮಹ್ಮದ್ ಗೌಸ್ ತನ್ನ ಇಬ್ಬರು ಮಕ್ಕಳ ಪುಂಡಾಟ, ರೌಡಿಗಿರಿ ಮತ್ತು ಗೂಂಡಾಗಿರಿಯಿಂದ ಅದೆಷ್ಟು ಬೇಸತ್ತಿದ್ದಾರೆಂದರೆ, ಅವರನ್ನು ಸಾಯಿಸಿಬಿಡಿ ಅಂತ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ಅವರ ಮುಂದೆ ಕಣ್ಣೀರಿಡುತ್ತಾ ಅವಲತ್ತುಕೊಂಡಿದ್ದಾರೆ. ಇವರ ಮಗ ಅಫ್ತಾಬ್ ಕರಡಿಗುಡ್ಡ ಒಬ್ಬ ರೌಡಿಶೀಟರ್. ಅವನಿಗೆ ನಗರದ ಮತ್ತೊಬ್ಬ ರೌಡಿಶೀಟರ್ ಜವೂರ್ ಬೇಪಾರಿ ಜೊತೆ ಹಳೆಯ ದ್ವೇಷ. ಎರಡು ದಿನಗಳ ಹಿಂದೆ ಅಫ್ತಾಭ್ ಮತ್ತು ಜವೂರ್ ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ತನ್ನ ಕುಕೃತ್ಯಗಳಿಗೆ ಅಫ್ತಾಬ್ ತನ್ನ ತಮ್ಮನನ್ನೂ ಜೊತೆ ಕರೆದೊಯ್ಯುತ್ತಿದ್ದ.

ಗ್ಯಾಂಗ್ ವಾರ್ ನಲ್ಲಿ ಅಫ್ತಾಬ್, ಜವೂರ್ ನ ಕೊಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಅವನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ನಂತರ ಅಫ್ತಾಬ್ ತಂದೆ ಗೌಸ್ ರನ್ನು ಭೇಟಿಯಾದ ಪೊಲೀಸ್ ಕಮೀಶನರ್ ಗೆ ಅವರ ಅಸಹಾಯಕತೆ ಗೊತ್ತಾಗಿದೆ. ಅವರನ್ನು ಮಾನವೀಯ ಕಳಕಳಿಯಿಂದ ಸಂತೈಸಿದ ಶಶಿಕುಮಾರ್ ಚಿಂತಿಸಬೇಡಿ ನಾವೇ ನಿಮ್ಮ ಮಕ್ಕಳನ್ನು ಸರಿದಾರಿಗೆ ತರುತ್ತೇವೆ ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Crime News: ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ; ಉತ್ತರಾಖಂಡದಲ್ಲೂ ಭೀಕರ ಕೃತ್ಯ