ಸಾರಾಯಿ ನಿಷೇಧ ಮಾಡುವಂತೆ ಪಂಚಾಯಿತಿ ಕಚೇರಿ ಮಾಳಿಗೆಯೇರಿ ಕುಳಿತ ಕುಡುಕ ಕಾಕಪ್ಪ ಅಮಲಿಳಿದ ನಂತರ ಕೆಳಗಿಳಿದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 05, 2022 | 12:38 PM

ಅಂದಹಾಗೆ, ಕರ್ನಾಟಕದಲ್ಲಿ ಸಾರಾಯಿ ನಿಷೇಧಗೊಂಡು ಜಮಾನವೇ ಕಳೆದಿದೆ ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಅದು ಈಗಲೂ ಸಿಗುತ್ತಿದೆಯೇ?

ಬಾಗಲಕೋಟೆ ಜಿಲ್ಲೆ ಬಾದಾಮಿ (Badami) ತಾಲ್ಲೂಕಿನ ಕಾಕನೂರು ಗ್ರಾಮದ ನಿವಾಸಿ ಕಾಕಪ್ಪ (Kakappa) ಮಾದರ ಹೆಸರಿನ ವ್ಯಕ್ತಿಯ ವರಸೆ ನೋಡಿ ಮಾರಾಯ್ರೇ. ಖುದ್ದು ಸಾರಾಯಿ ಕುಡಿದು ಗ್ರಾಮ ಪಂಚಾಯತಿ ಕಚೇರಿಯ ಮಾಳಿಗೆ ಹತ್ತಿ ಕೂತು ತನ್ನ ಬೇಡಿಕೆಯನ್ನು ಊರವರ ಅಮಲಿನಲ್ಲಿ ಹೇಳುತ್ತಿರುವ ಅವನು ಹಾಗೆ ಮಾಡದಿದ್ದರೆ ಪಂಚಾಯಿತಿ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ. ಗ್ರಾಮಸ್ಥರು (residents) ಅವನ ಮನವೊಲಿಸಿ ಕೆಳಗೆ ಕರೆತಂದರು. ಅಂದಹಾಗೆ, ಕರ್ನಾಟಕದಲ್ಲಿ ಸಾರಾಯಿ ನಿಷೇಧಗೊಂಡು ಜಮಾನವೇ ಕಳೆದಿದೆ ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಅದು ಈಗಲೂ ಸಿಗುತ್ತಿದೆಯೇ?