ಮುರುಘಾ ಮಠದ ಸ್ವಾಮೀಜಿಗಳಿಗೆ ಸಿಗಲಿಲ್ಲ ಜಾಮೀನು, 9-ದಿನ ನ್ಯಾಯಾಂ ವಶಕ್ಕೆ ಒಪ್ಪಿಸಿದ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ

ಮುರುಘಾ ಮಠದ ಸ್ವಾಮೀಜಿಗಳಿಗೆ ಸಿಗಲಿಲ್ಲ ಜಾಮೀನು, 9-ದಿನ ನ್ಯಾಯಾಂ ವಶಕ್ಕೆ ಒಪ್ಪಿಸಿದ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 05, 2022 | 2:04 PM

ಆದರೆ 9 ದಿನಗಳ ನ್ಯಾಯಾಂಗ ವಶಕ್ಕೆ ನೀಡುವ ಆದೇಶ ನ್ಯಾಯಾಲಯ ಪ್ರಕಟಿಸುತ್ತಿದ್ದಂತೆಯೇ ಸ್ವಾಮೀಜಿ ತೀವ್ರ ನಿರಾಶೆಗೊಳಗಾದರು.

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳ (Shivamurthy Swamiji) ಮೂರು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದರಿಂದ ಅವರನ್ನು ಚಿತ್ರದುರ್ಗದ ಜಿಲ್ಲಾ ನ್ಯಾಯಲಯದ (district court) ಮುಂದೆ ಸೋಮವಾರ ಹಾಜರುಪಡಿಸಲಾಗಿತ್ತು. ಶ್ರೀಗಳು ಈಗಾಗಲೇ ಜಾಮೀನು (bail) ಕೋರಿ ಅರ್ಜಿ ಸಲ್ಲಿಸಿರುವುದರಿಂದ ನ್ಯಾಯಾಲಯ ಅದನ್ನು ಮಂಜೂರು ಮಾಡೀತು ಎಂಬ ನಿರೀಕ್ಷೆ ಅವರಲ್ಲಿತ್ತು. ಆದರೆ 9 ದಿನಗಳ ನ್ಯಾಯಾಂಗ ವಶಕ್ಕೆ ನೀಡುವ ಆದೇಶ ನ್ಯಾಯಾಲಯ ಪ್ರಕಟಿಸುತ್ತಿದ್ದಂತೆಯೇ ಸ್ವಾಮೀಜಿ ತೀವ್ರ ನಿರಾಶೆಗೊಳಗಾದರು.