ಇಬ್ಬರು ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಬಸವಸಿದ್ಧಲಿಂಗ ಸ್ವಾಮೀಜಿಗಳ ದೇಹ ಮುಟ್ಟಲು ಅವಕಾಶ ನೀಡಲ್ಲ: ಗ್ರಾಮಸ್ಥರು
ಪೊಲೀಸರೇನಾದರೂ ಸ್ವಾಮೀಜಿಗಳ ದೇಹ ಮುಟ್ಟುವ ಪ್ರಯತ್ನ ಮಾಡಿದರೆ ರಕ್ತಕ್ರಾಂತಿಯಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.
ಬೆಳಗಾವಿ: ಗುರು ಮಡಿವಾಳೇಶ್ವರ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿಯವರ (Basavasiddhalinga Swamy) ಸಾವು ನೇಗಿನಹಾಳ ಗ್ರಾಮದ ಜನರನ್ನು ಭಾವುಕರಾಗಿಸಿದೆ. ಸ್ವಾಮೀಜಿಯವರು ತಮ್ಮ ಮರಣ ಪತ್ರದಲ್ಲಿ ಉಲ್ಲೇಖಿಸಿರುವ ಇಬ್ಬರು ಮಹಿಳೆಯರ ವಿರುದ್ಧ ಕಾನೂನು ಕ್ರಮ ಆಗಲೇ ಬೇಕು ಅಲ್ಲಿಯವರೆಗೆ ಸ್ವಾಮೀಜಿಗಳ ದೇಹವನ್ನು ಮರಣೋತ್ತರ ಪರೀಕ್ಷೆಗೆ (postmortem) ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಅಂತ ಒಬ್ಬ ನಿವಾಸಿ ಗದ್ಗಿತರಾಗಿ ಹೇಳುತ್ತಿದ್ದಾರೆ. ಪೊಲೀಸರೇನಾದರೂ ಸ್ವಾಮೀಜಿಗಳ ದೇಹ ಮುಟ್ಟುವ ಪ್ರಯತ್ನ ಮಾಡಿದರೆ ರಕ್ತಕ್ರಾಂತಿಯಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.
Latest Videos