ಮಂಡ್ಯದಲ್ಲಿ ಪಾನಮತ್ತ ಮಹಿಳೆಯೊಬ್ಬಳು ಬೀದಿಗೆ ಬಂದು ರಂಪಾಟ ಮಾಡಿ ದಾರಿಹೋಕರನ್ನು ಬೈದಾಡಿದಳು!

ಮಂಡ್ಯದಲ್ಲಿ ಪಾನಮತ್ತ ಮಹಿಳೆಯೊಬ್ಬಳು ಬೀದಿಗೆ ಬಂದು ರಂಪಾಟ ಮಾಡಿ ದಾರಿಹೋಕರನ್ನು ಬೈದಾಡಿದಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 05, 2024 | 12:19 PM

ಪಾನಮತ್ತ ಮಹಿಳೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಅಂಶವನ್ನು ನಾವು ಗಮನಿಸಬೇಕು. ಕಾಮುಕನೊಬ್ಬ ಅಕೆಯ ಪತಿ ಅಥವಾ ಸಂಬಂಧಿ ಅಂತ ಹೇಳಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದುರ್ವ್ಯವಹಾರ ನಡೆಸಿದ್ದರೆ ಆಕೆ ತನ್ನ ಕುಟುಂಬಕ್ಕೆ ಮುಖ ತೋರಿಸಲಾಗದ ಸ್ಥಿತಿ ನಿರ್ಮಾಣವಾಗುತಿತ್ತು. ಇಂಥ ಸನ್ನಿವೇಶಗಲ್ಲಿ ಪ್ರಜ್ಞಾವಂತ ನಾಗರಿಕರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸುವುದೇ ಒಳಿತು.

ಮಂಡ್ಯ: ಮತ್ತೊಮ್ಮೆ ಮಾಲಾಶ್ರೀ (Malashri) ಅವರ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಹಾಡು ನೆನಪಿಸಿಕೊಳ್ಳುವಂತೆ ಮಾಡಿದ್ದಾಳೆ ಮಂಡ್ಯದ ಈ ಮಹಿಳೆ. ನಗರದ ಸಂಜಯ್ ಸರ್ಕಲ್ ಬಳಿ ಬೆಳ್ಳಂಬೆಳಗ್ಗೆಯೇ ಹೊಟ್ಟೆಗೆ ಗುಂಡಿಳಿಸಿ (drunk woman) ತೂರಾಡುತ್ತಾ ಅಲೆದಾಡುತ್ತಿರುವ ಮಹಿಳೆ ಬೀದಿಯಲ್ಲಿ ರಂಪಾಟ ಕೂಡ ನಡೆಸಿದ್ದಾಳೆ. ಕುಡಿತ ಒಬ್ಬ ವ್ಯಕ್ತಿಯ-ಪುರುಷನಾಗಿರಲಿ ಅಥಾವ ಮಹಿಳೆ, ಅವರ ವೈಯಕ್ತಿಕ ವಿಚಾರ, ನಾವು ಪ್ರಶ್ನಿಸುವಂತಿಲ್ಲ; ಅದು ಬೇರೆ ವಿಚಾರ. ಆದರೆ ಮಹಿಳೆಯೊಬ್ಬಳು ಕಂಠಮಟ್ಟ ಕುಡಿದು ಹೀಗೆ ಸಾರ್ವಜನಿಕವಾಗಿ (publicly) ಸೀನ್ ಸೃಷ್ಟಿಸುವುದು ಸರಿಯಲ್ಲ. ಆಕೆಯ ಬದಲು ಒಬ್ಬ ಪುರುಷನಾಗಿದ್ದರೆ ಅದನ್ನು ಸುದ್ದಿ ಮಾಡುವ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಅಂಥ ದೃಶ್ಯಗಳನ್ನು ನಾವು ಹೆಚ್ಚುಕಡಿಮೆ ಪ್ರತಿನಿತ್ಯ ನೋಡುತ್ತೇವೆ. ಈಕೆ ರಸ್ತೆಯಲ್ಲಿ ಓಡಾಡುವ ಜನರಿಗೆ ಬೈದಾಡಿದ್ದಾಳೆ, ಅಂಗಡಿಗಳ ಮುಂದೆ ನಿಂತು ವ್ಯಾಪಾರಸ್ಥರಿಗೆ ಮತ್ತು ಅವರ ಗ್ರಾಹಕರಿಗೆ ತೊಂದರೆ ಮಾಡಿದ್ದಾಳೆ ಎಂದು ಮಂಡ್ಯದ ಟಿವಿ9 ವರದಿಗಾರ ಮಾಹಿತಿ ನೀಡಿದ್ದಾರೆ. ಆಕೆಯ ವರ್ತನೆಯಿಂದ ಬೇಸತ್ತ ಜನ ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಹಿಳಾ ಕಾನ್ ಸ್ಟೇಬಲ್ ಗಳು ಮಂಡ್ಯದ ಮಾಲಾಶ್ರೀಯನ್ನು ಸ್ಟೇಶನ್ ಕರೆದೊಯ್ದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ