ಬೀದರ್ ಸ್ಮಶಾನದಲ್ಲಿ ನಿರ್ಮಿಸಿರುವ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ, ವರ್ಷದಿಂದ ಈ ದುಃಸ್ಥಿತಿ!
ಸ್ಮಶಾನ ಇದೆ ಎಂಬ ಕಾರಣಕ್ಕೆ ಗರ್ಭಿಣಿಯರು ಇಲ್ಲಿಗೆ ಹೆರಿಗೆಗೆ ಬರುತ್ತಿಲ್ಲ. ಹೊರರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮು ನೆಗಡಿ ಜ್ವರದಿಂದ ಬಳಲುವ ರೋಗಿಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಮಶಾನದಲ್ಲಿನ ಆಸ್ಪತ್ರೆಯಲ್ಲಿ ಮಗು ಜನಿಸಿದರೆ ಕೇಡಾಗುತ್ತೆ ಅನ್ನೋ ಕಾರಣಕ್ಕೆ ಗರ್ಭಿಣಿಯರು ಚಿಕಿತ್ಸೆಗೆ ಇಲ್ಲಿಗೆ ಬರುತ್ತಿಲ್ಲ.
ಬೀದರ್: ಸ್ಮಶಾನದಲ್ಲಿಯೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಮತ್ತು ಒಂದು ವರ್ಷದಿಂದ ಆ ಸ್ಮಶಾನ ಜಾಗದಲ್ಲಿರುವ ಆರೋಗ್ಯ ಕೇಂದ್ರಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿಯರು ಹೆರಿಗೆಗೆ ಬರುತ್ತಿಲ್ಲ. ಬೀದರ್ ತಾಲೂಕಿನ ಬಗದಲ್ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ದುಃಸ್ಥಿತಿ ನಿರ್ಮಾಣವಾಗಿದೆ.
ಸ್ಮಶಾನ ಇದೆ ಎಂಬ ಕಾರಣಕ್ಕೆ ಗರ್ಭಿಣಿಯರು ಇಲ್ಲಿಗೆ ಹೆರಿಗೆಗೆ ಬರುತ್ತಿಲ್ಲ. ಹೊರರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮು ನೆಗಡಿ ಜ್ವರದಿಂದ ಬಳಲುವ ರೋಗಿಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಮಶಾನದಲ್ಲಿನ ಆಸ್ಪತ್ರೆಯಲ್ಲಿ ಮಗು ಜನಿಸಿದರೆ ಕೇಡಾಗುತ್ತೆ ಅನ್ನೋ ಕಾರಣಕ್ಕೆ ಗರ್ಭಿಣಿಯರು ಚಿಕಿತ್ಸೆಗೆ ಇಲ್ಲಿಗೆ ಬರುತ್ತಿಲ್ಲ. ಮಗುವಿನ ಮುಂದಿನ ಭವಿಷ್ಯ ಚೆನ್ನಾಗಿರೋದಿಲ್ಲ ಅನ್ನೋ ಕಾರಣಕ್ಕೆ ಮಹಿಳೆಯರು ಬರುತ್ತಿಲ್ಲ.
Also read: ದೊಡ್ಡಬಳ್ಳಾಪುರ – ನೂರಾರು ವರ್ಷಗಳ ಸ್ಮಶಾನ ಜಾಗವನ್ನು ತನ್ನದೆಂದು ಗ್ರಾಮಸ್ಥರೊಬ್ಬರು ವಶಪಡಿಸಿಕೊಂಡಿದ್ದಾರೆ, ಮುಂದೇನು?
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ