ಮಂಗಳೂರಿನ ಬಾರೊಂದರ ಬಳಿ ಕುಡುಕನಿಗೆ ಸಿಕ್ಕ ಲಕ್ಷಗಟ್ಟಲೆ ಹಣ ಪೊಲೀಸರ ‘ವಶಕ್ಕೆ’ ಹೋಯಿತು!
ಶಿವರಾಜ್ ಹೇಳುವ ಹಾಗೆ ಪೆಟ್ಟಿಗೆಯಲ್ಲಿ ಕನಿಷ್ಟ ರೂ. 10 ಲಕ್ಷದಷ್ಟು ಹಣವಿತ್ತು. ಅದರೆ ಪೊಲೀಸರು ರೂ 49,000 ಮಾತ್ರ ಇತ್ತೆಂದು ಹೇಳುತ್ತಿದ್ದಾರೆ.
ಮಂಗಳೂರು: ನಗರದ ಪಂಪ್ ವೆಲ್ ಬಾರ್ ಬಳಿ ಶಿವರಾಜ್ (Shivaraj) ಹೆಸರಿನ ವ್ಯಕ್ತಿಗೆ ನೋಟಿನ ಕಟ್ಟುಗಳಿದ್ದ ಒಂದು ಪೆಟ್ಟಿಗೆ (money box) ಸಿಕ್ಕಿದೆ. ಮದ್ಯವ್ಯಸನಿಯಾಗಿರುವ (alcoholic) ಶಿವರಾಜ್ ಆ ಪೆಟ್ಟಿಗೆಯಿಂದ ಒಂದು ಸಾವಿರ ಹಣ ಎತ್ತಿಕೊಂಡು ಗೆಳೆಯನೊಂದಿಗೆ ಬಾರ್ ಗೆ ಹೋಗಿ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಪೆಟ್ಟಿಗೆಯಿಂದ ನೋಟ್ ಗಳ ಒಂದು ಕಟ್ಟು ತೆಗೆದು ತನ್ನ ಸ್ನೇಹಿತನಿಗೆ ‘ದಾನ’ ಮಾಡಿದ್ದಾರೆ. ಅಷ್ಟರಲ್ಲಿ ಶಿವರಾಜ್ ಗೆ ಹಣ ಸಿಕ್ಕ ಸುಳಿವು ಪೊಲೀಸರಿಗೆ ಸಿಕ್ಕು ಅವರನ್ನು ಠಾಣೆಗೆ ಕರೆದೊಯ್ದು ಪೆಟ್ಟಿಗೆ ಕಸಿದುಕೊಂಡಿದ್ದಾರೆ. ಅದರ ಜೊತೆಗೆ ಶಿವರಾಜರನ್ನು 3 ದಿನಗಳ ಕಾಲ ಠಾಣೆಯಲ್ಲಿ ಕೂಡಿಹಾಕಿದ್ದಾರೆ. ಹಣದ ಅಸಲೀ ವಾರಸುದಾರರ್ಯಾರೂ ಅದನ್ನು ಕೇಳಿಕೊಂಡು ಠಾಣೆಗೆ ಹೋಗಿಲ್ಲ. ಶಿವರಾಜ್ ಹೇಳುವ ಹಾಗೆ ಪೆಟ್ಟಿಗೆಯಲ್ಲಿ ಕನಿಷ್ಟ ರೂ. 10 ಲಕ್ಷದಷ್ಟು ಹಣವಿತ್ತು. ಅದರೆ ಪೊಲೀಸರು ರೂ 49,000 ಮಾತ್ರ ಇತ್ತೆಂದು ಹೇಳುತ್ತಿದ್ದಾರೆ. ಕುಡುಕನ ಮಾತು ನಂಬೋಕ್ಕಾಗುತ್ತಾ ಅಂತ ಪೊಲೀಸರು ಹೇಳಿದರೆ ಆಶ್ಚರ್ಯವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ