Pancharatna Yatre : ಅಭಿಮಾನಿಗಳ ಪ್ರೀತಿಗೆ ಕುಮಾರಸ್ವಾಮಿ ಫುಲ್ ಖುಷ್
ಜಿಲ್ಲೆಯ ಗುಬ್ಬಿ ಪಟ್ಟಣ ತಲುಪಿದ ಪಂಚರತ್ನ ಯಾತ್ರೆ. ಗುಬ್ಬಿ ಪಟ್ಟಣಕ್ಕೆ ತಲುಪುತ್ತಿದ್ದಂತೆ ಕುಮಾರಸ್ವಾಮಿಗೆ ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆ ಸುರಿಸಿದ್ದಾರೆ.
ತುಮಕೂರು: ಜಿಲ್ಲೆಯ ಗುಬ್ಬಿ ಪಟ್ಟಣ ತಲುಪಿದ ಪಂಚರತ್ನ ಯಾತ್ರೆ. ಗುಬ್ಬಿ ಪಟ್ಟಣಕ್ಕೆ ತಲುಪುತ್ತಿದ್ದಂತೆ ಕುಮಾರಸ್ವಾಮಿಗೆ ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆ ಸುರಿಸಿದ್ದಾರೆ. ಸುಮಾರೂ ಮೂರು ರೌಂಡ್ ಹೆಲಿಕಾಪ್ಟರ್ನಲ್ಲಿ ಗುಲಾಬಿ ಹೂಗಳನ್ನು ಕುಮಾರಸ್ವಾಮಿಯ ಮೇಲೆ ಸುರಿದು ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಗುಬ್ಬಿ ಪಟ್ಟಣದ ಆನಂದ ಸಂಭ್ರಮ, ಸಡಗರ ಅಭಿಮಾನಿಗಳ ಪ್ರೀತಿ ವಿಶ್ವಾಸವನ್ನು ಕಂಡು ಕುಮಾರಸ್ವಾಮಿ ಪುಲ್ ಖುಷ್ ಆಗಿದ್ದಾರೆ. ಜನರ ಪ್ರೀತಿ, ವಿಶ್ವಾಸವನ್ನು ಕಣ್ತುಂಬಿಸಿಕೊಂಡಿದ್ದಾರೆ.
Published on: Dec 06, 2022 07:12 PM
Latest Videos