Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ ಮಂಜುನಾಥ್ ಮಾಧ್ಯಮದವರೊಂದಿಗೆ ಮಾತಾಡುವಾಗ ಕುಡುಕನೊಬ್ಬ ‘ಮಂಜಣ್ಣ ಕರ್ನಾಟಕದ ಸುಪುತ್ರ’ ಅಂತ ಕೂಗಿದ!

ಡಾ ಮಂಜುನಾಥ್ ಮಾಧ್ಯಮದವರೊಂದಿಗೆ ಮಾತಾಡುವಾಗ ಕುಡುಕನೊಬ್ಬ ‘ಮಂಜಣ್ಣ ಕರ್ನಾಟಕದ ಸುಪುತ್ರ’ ಅಂತ ಕೂಗಿದ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2024 | 5:40 PM

ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದೇವೆ ಅಂತ ಡಾ ಮಂಜುನಾಥ್ ಹೇಳುವಾಗಲೇ ಅವರ ಎಡಭಾಗದಲ್ಲಿ ನಿಂತಿದ್ದ ಕಾರ್ಯಕರ್ತರ ನಡುವೆ ಇದ್ದ ಕಂಠಮಟ್ಟ ಕುಡಿದಿದ್ದ ವ್ಯಕ್ತಿ ಜೋರಾಗಿ ಮಂಜಣ್ಣ ಅಂತ ಕಿರುಚುತ್ತಾನೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ (Dr CN Manjunath) ತಮ್ಮ 4 ದಶಕಗಳಿಗೂ ಹೆಚ್ಚು ಸುದೀರ್ಘ ವೈದ್ಯಕೀಯ ವೃತ್ತಿಯಲ್ಲಿ (medical profession) ಯಾವತ್ತೂ ಎದುರಿಸಲಾರದ ಸನ್ನಿವೇಶಗಳನ್ನು ಚುನಾವಣಾ ಕಣದಲ್ಲಿ ಎದುರಿಸುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಇವತ್ತು ಅವರು ಪ್ರಚಾರ ಮಾಡುತ್ತಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಲು ನಿಂತಾಗ, ಒಬ್ಬ ಕುಡುಕ ಅಭಿಮಾನಿಯ (drunk supporter) ಉತ್ಕಟಾಭಿಮಾನವನ್ನು ಎದುರಿಸಬೇಕಾಯಿತು! ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದೇವೆ ಅಂತ ಡಾ ಮಂಜುನಾಥ್ ಹೇಳುವಾಗಲೇ ಅವರ ಎಡಭಾಗದಲ್ಲಿ ನಿಂತಿದ್ದ ಕಾರ್ಯಕರ್ತರ ನಡುವೆ ಇದ್ದ ಕಂಠಮಟ್ಟ ಕುಡಿದಿದ್ದ ವ್ಯಕ್ತಿ ಜೋರಾಗಿ ಮಂಜಣ್ಣ ಅಂತ ಕಿರುಚುತ್ತಾನೆ.

ಅವನು ಪದೇಪದೆ ಕಿರುಚಿದಾಗ ವೈದ್ಯರು ತಮ್ಮ ಮಾತು ನಿಲ್ಲಿಸಿ ಅವನೆಡೆ ಕೈ ಮಾಡಿ ಹತ್ತಿರಕ್ಕೆ ಕರೆಯುತ್ತಾರೆ. ಏಯ್ ಹೋಯ್ ಅನ್ನುತ್ತಾ ತೂರಾಡಿಕೊಂಡು ಡಾ ಮಂಜುನಾಥ್ ಹತ್ತಿರ ಬರುವ ದೇವದಾಸ್, ವೈದ್ಯರ ಬಲಭಾಗದಲ್ಲಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ರನ್ನು ನೋಡಿ ಅಣ್ಣ ನಮಸ್ಕಾರ ಅಂತ ಎರಡೂ ಕೈ ಜೋಡಿಸುತ್ತಾನೆ. ನಂತರ ಮಾಧ್ಯಮದ ಕೆಮೆರಾಗಳ ತಿರುಗಿ, ನಮಗೆ ಆರೋಗ್ಯದಲ್ಲಿ ಎಲ್ಲಾನೂ ಕೊಟ್ಟಿದ್ದಾನೆ, ಕರ್ನಾಟಕ ಸುಪುತ್ರ ಮಂಜಣ್ಣ, ಮಂಜಣ್ಣ… ಅಪರೇಶನ್ ಮಾಡಿಕೊಟ್ಟವ್ನೆ ಅನ್ನುತ್ತಾ ಅವರ ಕೈಹಿಡಿಯುತ್ತಾನೆ. ಡಾ ಮಂಜುನಾಥ್ ಏನು ಮಾಡಬೇಕೆನ್ನುವುದು ಗೊತ್ತಾಗದೆ ಮುಗುಳ್ನಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: