ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಜನ ತಿರಸ್ಕರಿಸಲಿದ್ದಾರೆ: ಕೆಎಂ ಶಿವಲಿಂಗೇಗೌಡ, ಶಾಸಕ

ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಜನ ತಿರಸ್ಕರಿಸಲಿದ್ದಾರೆ: ಕೆಎಂ ಶಿವಲಿಂಗೇಗೌಡ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2024 | 6:31 PM

ಸಭೆಯೊಂದರಲ್ಲಿ ಮಾತಾಡುವಾಗ ದೇಹದಲ್ಲಿ ಒಂದು ಹನಿ ರಕ್ತ ಇರುವವರೆ ಬಿಜೆಪಿ ಜೊತೆ ಸ್ನೇಹ ಬೆಳೆಸಲ್ಲ ಹೇಳಿದ್ದ ಕುಮಾರಸ್ವಾಮಿಗೆ ಮರೆತುಹೋಗಿದೆ. ಯಡಿಯೂರಪ್ಪ ಸರ್ಕಾರ ಉರುಳಿಸಲ ನಡೆಸಿದ ಪ್ರಯತ್ನ ಮತ್ತು ಬಿಜೆಪಿಯವರೇ ತಮ್ಮ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದು ಸಹ ಅವರಿಗೆ ಮರೆತುಹೋಗಿದೆ ಎಂದು ಶಿವಲಿಂಗೇಗೌಡ ಹೇಳಿದರು.

ಹಾಸನ: ಅರಸೀಕೆರೆಯಲ್ಲಿ ಇಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ಪರ ಚುನಾವಣಾ ಪ್ರಚಾರ ಮಾಡಿದ ಸ್ಥಳೀಯ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಅವರು ಬಿಜೆಪಿ ಜತೆ ಮೈತ್ರಿ ಬೆಳೆಸಿರುವ ಹೆಚ್ ಡಿ ದೇವೇಗೌಡ (HD Devegowda) ಮತ್ತು ಹೆಚ್ ಡಿ ಕುಮಾರಸ್ವಾಮಿಯನ್ನು (HD Kumaraswamy) ತೀವ್ರವಾಗಿ ಟೀಕಿಸಿದರು. ಸಭೆಯೊಂದರಲ್ಲಿ ಮಾತಾಡುವಾಗ ದೇಹದಲ್ಲಿ ಒಂದು ಹನಿ ರಕ್ತ ಇರುವವರೆ ಬಿಜೆಪಿ ಜೊತೆ ಸ್ನೇಹ ಬೆಳೆಸಲ್ಲ ಹೇಳಿದ್ದ ಕುಮಾರಸ್ವಾಮಿಗೆ ಮರೆತುಹೋಗಿದೆ. ಯಡಿಯೂರಪ್ಪ ಸರ್ಕಾರ ಉರುಳಿಸಲ ನಡೆಸಿದ ಪ್ರಯತ್ನ ಮತ್ತು ಬಿಜೆಪಿಯವರೇ ತಮ್ಮ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದು ಸಹ ಅವರಿಗೆ ಮರೆತುಹೋಗಿದೆ ಎಂದು ಶಿವಲಿಂಗೇಗೌಡ ಹೇಳಿದರು.

ದೇವೇಗೌಡರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಬಲ ನೀಡೋದಾಗಿ ಹೇಳಿ ಸ್ಥಾನದಲ್ಲಿ ಮುಂದುವರಿಯುವಂತೆ ಆಗ್ರಹಿಸಿದ್ದರು. ಆದರೆ, ಪ್ರಧಾನಿ ಹುದ್ದೆಯನ್ನು ತ್ಯಜಿಸುವೆ, ಕೋಮುವಾದಿ ಬಿಜೆಪಿ ಜೊತೆ ಮಾತ್ರ ಸಖ್ಯ ಬೆಳೆಸಲ್ಲ ಅಂತ ದೇವೇಗೌಡರು ಸಹಕಾರವನ್ನು ತಿರಸ್ಕರಿಸಿದ್ದರು. ಆದರೆ ಈಗೇನಾಗುತ್ತಿದೆ? ಬಿಜೆಪಿ-ಜೆಡಿಎಸ್ ಅನೈತಿಕ ಮೈತ್ರಿಯನ್ನು ಜನ ಒಪ್ಪದೆ ತಿರಸ್ಕರಿಸುತ್ತಾರೆ, ಜೂನ್ 4 ರಂದು ಫಲಿತಾಂಶ ಹೊರಬಿದ್ದಾಗ ಅದು ಸ್ಪಷ್ಟವಾಗಲಿದೆ ಎಂದು ಶಿವಲಿಂಗೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka Budget Session: ಕೊಬ್ಬರಿಗೆ ಬೆಂಬಲ ಬೆಲೆ; ಕೆಎಂ ಶಿವಲಿಂಗೇಗೌಡ ಮತ್ತು ಬಿಜೆಪಿಯ ಸುರೇಶ್ ಗೌಡ ಮಧ್ಯೆ ಬಿರುಸಿನ ವಾಗ್ವಾದ