Loading video

ಮದುವೆ ಸಂಭ್ರಮದಲ್ಲಿದ್ದ ಮಗನನ್ನು ಹೊಡೆದು ಕೊಂದ ತಂದೆ: ಆಗಿದ್ದೇನು?

| Updated By: ರಮೇಶ್ ಬಿ. ಜವಳಗೇರಾ

Updated on: Mar 09, 2025 | 4:12 PM

ಮದುವೆ ಸಂಭ್ರಮದಲ್ಲಿದ್ದ ಮಗನನ್ನು ತಂದೆಯೇ ಹೊಡೆದು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮಂಜುನಾಥ ಎನ್ನುವ ಯುವಕನ ಮದುವೆ ಇದೇ ಮಾರ್ಚ್​ 12ರಂದು ನಿಶ್ವಿತವಾಗಿತ್ತು. ಹೀಗಾಗಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು . ಆದ್ರೆ, ಮನೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.

ಬೆಳಗಾವಿ, ಮಾರ್ಚ್​ 09): ಬೆಳಗಾವಿ ಜಿಲ್ಲೆಯ ಕಿತ್ತೂರಿನ ಮಂಜುನಾಥ ಎನ್ನುವ ಯುವಕನ ಮದುವೆ ಇದೇ ಮಾರ್ಚ್​ 12ರಂದು ನಿಶ್ವಿತವಾಗಿತ್ತು. ಹೀಗಾಗಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು . ತಮ್ಮನ ಮದ್ವೆಗೆಂದೇ ಆರ್ಮಿಯಲ್ಲಿದ್ದ ಅಣ್ಣ ಸಹ ಊರಿಗೆ ಬಂದಿದ್ದ. ಆದ್ರೆ, ಮದ್ವೆಯಾಗಬೇಕಿದ್ದ ಮಂಜುನಾಥನೇ ಕೊಲೆಯಾಗಿದ್ದಾನೆ. ಹೀಗಾಗಿ ಮದ್ವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಹೌದು.. ಮದುವೆ (Marriage) ಖುಷಿಯಲ್ಲಿದ್ದ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಆತನ ತಂದೆ ಹಾಗೂ ಸಹೋದರ ಸೇರಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು (Kitturu) ತಾಲೂಕಿನ ಚಿಕ್ಕ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಉಳ್ಳಾಗಡ್ಡಿ(25) ಅಣ್ಣ, ತಂದೆಯಿಂದಲೇ ಕೊಲೆಯಾದವ. ಮಾರ್ಚ್​​ 12ರಂದು ಮಂಜುನಾಥ್ ಮದುವೆ ನಿಗದಿಯಾಗಿತ್ತು. ತಮ್ಮನ ಮದುವೆಗೆಂದು ಸೇನೆಯಲ್ಲಿದ್ದ ಅಣ್ಣ ರಜೆ ಮೇಲೆ ಬಂದಿದ್ದ. ಆದ್ರೆ, ನಿನ್ನೆ (ಮಾರ್ಚ್​ 08) ರಾತ್ರಿ ಮಂಜುನಾಥ್ ಮದ್ಯ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ನಾಗಪ್ಪ, ಗುರುಬಸಪ್ಪ ಸೇರಿಕೊಂಡು ಕಲ್ಲು & ಇಟ್ಟಿಗೆಯಿಂದ ಹೊಡೆದಿದ್ದಾರೆ. ಪರಿಣಾಮ ಮಂಜುನಾಥ್ ಮೃತಪಟ್ಟಿದ್ದಾನೆ.