ಉಕ್ರೇನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಲ್ಲಿ ಕೆಲವರನ್ನು ಏರ್ಲಿಫ್ಟ್ ಮಾಡಲಾಗಿದೆ, ಇನ್ನೂ ಅನೇಕರು ಅಲ್ಲುಳಿದಿದ್ದಾರೆ
ವಿಮಾನದಲ್ಲಿ ಒಬ್ಬ ಕನ್ನಡದ ಹುಡುಗಿ ಮಾತಾಡಿದ್ದಾರೆ. ಸುಮಾರು 240 ವಿದ್ಯಾರ್ಥಿಗಳು ಏರ್ ಇಂಡಿಯಾ ವಿಮಾನದಲ್ಲಿದ್ದೇವೆ, ನಾವೆಲ್ಲ ಕೆಲವು ಗಂಟೆಗಳಲ್ಲಿ ಸುರಕ್ಷಿತವಾಗಿ ಮುಂಬೈ ತಲುಪಿ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗ್ತೀವಿ ಅಂತ ಅವರು ಹೇಳಿದ್ದಾರೆ.
ಉಕ್ರೇನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಪೈಕಿ ಕೆಲವರು ಶನಿವಾರ ನಿರಾಳರಾದರು. ಯುದ್ಧಗ್ರಸ್ಥ ದೇಶದಲ್ಲಿ ಕಳೆದ ಮೂರು ದಿನಗಳಿಂದ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕುತ್ತಿದ್ದ ವಿದ್ಯಾರ್ಥಿಗಳಿಗೆ ಶನಿವಾರ ಆ ಭಯದಿಂದ ಮುಕ್ತಿ ಸಿಕ್ಕಿತು ಮತ್ತು ಸುರಕ್ಷಿತವಾಗಿ ಅವರು ಸ್ವದೇಶಕ್ಕೆ ಹಾರಿದರು. ಉಕ್ರೇನ್ ಗೆ ಅಂಟಿಕೊಂಡಂತಿರುವ ರುಮೇನಿಯಾದ (Romania) ರಾಜಧಾನಿ ಬುಖಾರೆಸ್ಟ್ ಮೂಲಕ ಏರ್ ಇಂಡಿಯಾ (Air India) ವಿಮಾನ ವಿದ್ಯಾರ್ಥಿಗಳು ಮತ್ತು ಇತರ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಯಿತು. ಸಾಲು ಸಾಲಾಗಿ ಬುಕಾರೆಸ್ಟ್ (Bucharest) ವಿಮಾನ ನಿಲ್ದಾಣದೊಳಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳ ಮುಖದಲ್ಲಿ ಕಾಣುತ್ತಿರುವ ಖುಷಿಯನ್ನು ಗಮನಿಸಿ. ಯಾಕಾಗಬಾರದು ಖುಷಿ? ಕೆಲವೇ ಗಂಟೆಗಳಷ್ಟು ಮುಂಚೆ ಅವರು ಯಾವಾಗ ಸ್ವದೇಶಕ್ಕೆ ವಾಪಸ್ಸು ಹೋಗಲಾದೀತು ಎಂಬ ಆತಂಕದಲ್ಲಿದ್ದರು.
ವಿಮಾನದಲ್ಲಿ ಒಬ್ಬ ಕನ್ನಡದ ಹುಡುಗಿ ಮಾತಾಡಿದ್ದಾರೆ. ಸುಮಾರು 240 ವಿದ್ಯಾರ್ಥಿಗಳು ಏರ್ ಇಂಡಿಯಾ ವಿಮಾನದಲ್ಲಿದ್ದೇವೆ, ನಾವೆಲ್ಲ ಕೆಲವು ಗಂಟೆಗಳಲ್ಲಿ ಸುರಕ್ಷಿತವಾಗಿ ಮುಂಬೈ ತಲುಪಿ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗ್ತೀವಿ ಅಂತ ಅವರು ಹೇಳಿದ್ದಾರೆ. ಅವರು ತಮ್ಮ ತಂದೆತಾಯಿಗಳಿಗೆ ಕಳಿಸಿರುವ ವಿಡಿಯೋ ಸಂದೇಶ ಇದು.
ವಿದ್ಯಾರ್ಥಿಗಳ ಒಂದು ಬ್ಯಾಚ್ ಭಾರತಕ್ಕೆ ಬಂದಿದೆ. ಆದರೆ ಇನ್ನೂ ಸಾವಿರಾರು ವಿದ್ಯಾರ್ಥಿಗಳು ಉಕ್ರೇನಲ್ಲಿದ್ದಾರೆ. ಉಕ್ರೇನ್ ದೇಶದ ಬೇರೆ ಬೇರೆ ಭಾಗಗಳಲ್ಲಿ ಅವರು ಚದುರಿ ಹೋಗಿದ್ದಾರೆ. ಅವರನ್ನೆಲ್ಲ ಸುರಕ್ಷಿತವಾದ ಉಕ್ರೇನಿನ ಮತ್ತೊಂದು ಗಡಿಭಾಗಕ್ಕೆ ಕರೆತಂದು ವಿಮಾನಗಳ ಮೂಲಕ ಏರ್ಲಿಫ್ಟ್ ಮಾಡಿಸಬೇಕಿದೆ. ಇದು ಸುಲಭದ ಕೆಲಸವಲ್ಲ. ಆ ದೇಶದಲ್ಲಿರುವ ಭಾರತದ ರಾಯಭಾರಿ ಕಚೇರಿ ಯುದ್ಧದೋಪಾದಿಯಲ್ಲಿ ಕೆಲಸ ಮಾಡಬೇಕಿದೆ.