Video: ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಡೊನಾಲ್ಡ್​ ಟ್ರಂಪ್

Updated on: Jan 14, 2026 | 9:30 AM

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೋಪದ ಕೈಗೆ ಬುದ್ಧಿ ಕೊಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ಅವರು ಅಮೆರಿಕದ ಕಾರ್ಖಾನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಮಧ್ಯದ ಬೆರಳು ತೋರಿಸಿದ್ದಷ್ಟೇ ಅಲ್ಲದೆ ಕೆಟ್ಟ ಭಾಷೆಯಲ್ಲಿ ಬೈದಿರುವ ವಿಡಿಯೋ ಇದಾಗಿದೆ. ಮಿಚಿಗನ್‌ನಲ್ಲಿರುವ ಫೋರ್ಡ್ ಸ್ಥಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನಾಕಾರ ಟ್ರಂಪ್​ಗೆ ಶಿಶುಕಾಮಿ ಎಂದು ಕರೆದಿದ್ದರು. ಅದಕ್ಕೆ ಕೋಪಗೊಂಡ ಟ್ರಂಪ್ ಕೆಟ್ಟದಾಗಿ ಬೈದಿದ್ದಾರೆ. ಕೂಗುತ್ತಿರುವ ವ್ಯಕ್ತಿ ಕ್ಲಿಪ್‌ನಲ್ಲಿ ಗೋಚರಿಸುವುದಿಲ್ಲ ಮತ್ತು ಆಡಿಯೋ ಸ್ಪಷ್ಟವಾಗಿಲ್ಲ.

ವಾಷಿಂಗ್ಟನ್, ಜನವರಿ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೋಪದ ಕೈಗೆ ಬುದ್ಧಿ ಕೊಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ಅವರು ಅಮೆರಿಕದ ಕಾರ್ಖಾನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಮಧ್ಯದ ಬೆರಳು ತೋರಿಸಿದ್ದಷ್ಟೇ ಅಲ್ಲದೆ ಕೆಟ್ಟ ಭಾಷೆಯಲ್ಲಿ ಬೈದಿರುವ ವಿಡಿಯೋ ಇದಾಗಿದೆ. ಮಿಚಿಗನ್‌ನಲ್ಲಿರುವ ಫೋರ್ಡ್ ಸ್ಥಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನಾಕಾರ ಟ್ರಂಪ್​ಗೆ ಶಿಶುಕಾಮಿ ಎಂದು ಕರೆದಿದ್ದರು. ಅದಕ್ಕೆ ಕೋಪಗೊಂಡ ಟ್ರಂಪ್ ಕೆಟ್ಟದಾಗಿ ಬೈದಿದ್ದಾರೆ. ಕೂಗುತ್ತಿರುವ ವ್ಯಕ್ತಿ ಕ್ಲಿಪ್‌ನಲ್ಲಿ ಗೋಚರಿಸುವುದಿಲ್ಲ ಮತ್ತು ಆಡಿಯೋ ಸ್ಪಷ್ಟವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 14, 2026 09:25 AM