ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನಕ್ಕೆ ಜನರು ಮುಗಿಬಿದ್ರೆ, ಯುವತಿ ಮಾತ್ರ ರೀಲ್ಸ್​ನಲ್ಲಿ ಬ್ಯುಸಿ, ವಿಡಿಯೋ ನೋಡಿ

|

Updated on: Jun 25, 2023 | 6:42 PM

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆಯಲು ಸಾವಿರಾರು ಜನರು ಜಮಾಯಿಸಿದ್ರೆ, ಇತ್ತ ಯುವತಿಯೋರ್ವಳು ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಳು,

ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ರೀಲ್ಸ್ ಸಖತ್ ಸೌಂಡ್ ಮಾಡುತ್ತಿವೆ. ಟಿಕ್​ಟಾಕ್ ಬ್ಯಾನ್ ಆದ ಬೆನ್ನಲ್ಲೇ ಇದೀಗ ಎಲ್ಲರು ರೀಲ್ಸ್ ಮೊರೆ ಹೋಗಿದ್ದು, ಇನ್​ಸ್ಟಾಗ್ರಾಮ್​​ನಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಯುವತಿಯರು ರೀಲ್ಸ್​ ಮಾಡಿದ್ದೇ ಮಾಡಿದ್ದು, ಸೋಶಿಯಲ್​ ಮೀಡಿಯಾಗೆ ಅಪ್ಲೋಡ್ ಮಾಡಿದ್ದೆ ಮಾಡಿದ್ದು. ಹೌದು…ಸ್ಥಳ ಯಾವುದೇ ಏನು ಅಂತ ನೋಡಲ್ಲ ರೀಲ್ಸ್ ಮಾಡೋದು ಇಲ್ಲ ರೀಲ್ಸ್ ನೋಡುತ್ತಿರುತ್ತಾರೆ. ಅದರಂತೆ ಯುವತಿಯೋರ್ವಳು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರೀಲ್ಸ್ ಮಾಡಿದ್ದಾಳೆ. ಸುಬ್ರಹ್ಮಣ್ಯನ ದರ್ಶನ ಪಡೆಯಲು ಸಾವಿರಾರು ಜನ ಜಮಾಯಿಸಿದ್ರೆ, ಈ ಹುಡುಗಿ ಮಾತ್ರ ರೀಲ್ಸ್​ನಲ್ಲಿ ಬ್ಯುಸಿಯಾಗಿದ್ದಾಳೆ.