ಕಸ ಸುರಿದು ಸಿಸಿ ಕ್ಯಾಮೆರಾ ಮುಂದೆ ಡ್ಯಾನ್ಸ್: ಯುವತಿಗೆ ಶಾಕ್ ಕೊಟ್ಟ ಮಾರ್ಷಲ್ಸ್
ಜಿಬಿಎ ಕಠಿಣ ಕ್ರಮಗಳ ಹೊರತಾಗಿಯೂ ಬೆಂಗಳೂರಲ್ಲಿ ಎಲ್ಲೆಂದರೆ ಅಲ್ಲಿ ಕಸ ಎಸೆಯುವ ಜನರ ಮನಸ್ಥಿತಿ ಬದಲಾಗಿಲ್ಲ. ಮೈಕೋ ಲೇಔಟ್ ಬಳಿ ಯುವತಿಯೊಬ್ಬಳು ಕಸ ಎಸೆದಿದ್ದಲ್ಲದೆ, ಸ್ಥಳದಲ್ಲಿ ಅಳವಡಿಸಲಾದ ಕ್ಯಾಮೆರಾ ಕಂಡು ಡ್ಯಾನ್ಸ್ ಮಾಡಿರುವ ಪ್ರಸಂಗ ನಡೆದಿದೆ. ಬಳಿಕ ಯುವತಿಯ ಮನೆಯನ್ನ ಹುಡುಕಿರುವ ಮಾರ್ಷಲ್ಸ್ ಆಕೆಗೆ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು, ನವೆಂಬರ್ 04: ಕಸ ಸುರಿದಿದ್ದಲ್ಲದೆ ಸಿಸಿ ಕ್ಯಾಮರಾ ಮುಂದೆ ಡ್ಯಾನ್ಸ್ ಮಾಡಿ ಹುಚ್ಚಾಟ ಮೆರೆದ ಯುವತಿಗೆ ಮಾರ್ಷಲ್ಗಳು ಶಾಕ್ ಕೊಟ್ಟ ಘಟನೆ ಬೆಂಗಳೂರಿನ ಮೈಕೋ ಲೇಔಟ್ ಬಳಿ ನಡೆದಿದೆ. ಕಸದ ಸಮಸ್ಯೆಗೆ ಮುಕ್ತಿ ಹಾಡಲು ಜಿಬಿಎ ಜೊತೆ ಇಲ್ಲಿನ ನಿವಾಸಿಗಳು ಕೈಜೋಡಿಸಿದ್ದು, ಕಸ ಹಾಕುತ್ತಿದ್ದ ಪಾಯಿಂಟ್ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಆ ಮೂಲಕ ಕಸ ಹಾಕುವವರನ್ನು ಪತ್ತೆ ಮಾಡುವ ಕೆಲಸಕ್ಕೆ ನಿರ್ಧರಿಸಲಾಗಿತ್ತು. ಕ್ಯಾಮರಾ ಕಂಡೂ ಕಸಹಾಕುವ ಚಾಳಿಯನ್ನ ಕೆಲವರು ಮುಂದುವರಿಸಿದ್ದು, ಯುವತಿಯೊಬ್ಬಳು ಇಲ್ಲಿ ಕಸ ತಂದು ಸುರಿದಿದ್ದಲ್ಲದೆ ಕ್ಯಾಮೆರಾ ಕಂಡು ಡ್ಯಾನ್ಸ್ ಮಾಡಿದ್ದಾಳೆ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಯುವತಿ ಮನೆ ಹುಡುಕಿ ಮಾರ್ಷಲ್ಸ್ 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
