ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶವಿರೋಧಿಯಲ್ಲ, ಒಳ್ಳೆಯ ವಿರೋಧ ಪಕ್ಷ ಬೇಕು: ಅನಂತಕುಮಾರ ಹೆಗಡೆ

|

Updated on: Jan 20, 2024 | 6:38 PM

ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹಾದೂರ್ ಶಾಸ್ತ್ರಿ ಅವರ ಕೊಲೆಯಾದ ಕೇವಲ 15 ದಿನಗಳ ಅಂತರದಲ್ಲಿ ಹೋಮಿ ಜಹಾಂಗೀರ್ ಭಾಭಾ ಮತ್ತು ವಿಕ್ರಮ್ ಸಾರಾಭಾಯ್ ಅವರ ಕೊಲೆಯಾಗುತ್ತದೆ. ಇವರ ಸಾವುಗಳು ಸಹಜವಾಗಿರಲಿಲ್ಲ. ಆ ಅವಧಿಯಲ್ಲಿ ಜನರಲ್ಲಿ ಆತಂಕ ಮೂಡಿಸುವ ಘಟನೆಗಳು ಸರಣಿಯೋಪಾದಿಯಲ್ಲಿ ಜರುಗಿದವು ಎಂದು ಹೆಗೆಡೆ ಹೇಳಿದರು.

ಕಾರವಾರ: ಜಿಲ್ಲೆಯ ಸಿದ್ದಾಪುರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ (Anantkumar Hegde) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾನು ಮತ್ತೊಮ್ಮೆ ದಾಖಲೆಯ ಅಂತರದಿಂದ ಗೆಲ್ಲಬೇಕು ಎಂದು ಹೇಳಿದರು. ಕಳೆದ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಮತಗಳ (record margin) ಅಂತರದಿಂದ ಗೆದ್ದಿದ್ದೆ ಎಂದ ಅವರು, ಈ ಬಾರಿ ಆ ದಾಖಲೆಯನ್ನೂ ಉತ್ತಮಪಡಿಸಬೇಕು ಎಂದು ಹೇಳಿದರು. ಅಮಿತ್ ಶಾ ಅವರು (Amit Shah) ಹೇಳಿರುವ ಹಾಗೆ ವಿರೋಧಿಗಳು ಮೇಲೇಳದಂತೆ ನೆಲಕಚ್ಚಿಸಬೇಕು ಎಂದ ಹೆಗಡೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಬೇಕು ಆದರೆ ದೇಶದ್ರೋಹಿ ವಿರೋಧ ಪಕ್ಷ ಬೇಡ ಎಂದು ಹೇಳಿದರು. ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹಾದೂರ್ ಬಹಾದ್ದೂರ್ ಶಾಸ್ತ್ರಿ ಅವರ ಕೊಲೆಯಾದ ಕೇವಲ 15 ದಿನಗಳ ಅಂತರದಲ್ಲಿ ಹೋಮಿ ಜಹಾಂಗೀರ್ ಭಾಭಾ ಮತ್ತು ವಿಕ್ರಮ್ ಸಾರಾಭಾಯಿ ಅವರ ಕೊಲೆಯಾಗುತ್ತದೆ. ಇವರ ಸಾವುಗಳು ಸಹಜವಾಗಿರಲಿಲ್ಲ. ಆ ಅವಧಿಯಲ್ಲಿ ಜನರಲ್ಲಿ ಆತಂಕ ಮೂಡಿಸುವ ಘಟನೆಗಳು ಸರಣಿಯೋಪಾದಿಯಲ್ಲಿ ಜರುಗಿದವು ಎಂದು ಹೆಗೆಡೆ ಹೇಳಿದರು. ಅವರ ಎಲ್ಲ ಷಡ್ಯಂತ್ರಗಳಿಗೆ ತೆರೆ ಬಿದ್ದಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 2014 ರಲ್ಲಿ ಎಂದು ಸಂಸದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ