ವಿಡಿಯೋ ನೋಡಿ: ಧಾರವಾಡದಲ್ಲಿ ಅನಾವರಣಗೊಳ್ಳಲಿದೆ ಶ್ರೀರಾಮನ ಬೃಹತ್ ಪ್ರತಿಮೆ
ಅಯೋಧ್ಯಾ ನಗರ ಬಡಾವಣೆಯ ಪ್ರವೇಶ ದ್ವಾರದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಅಯೋಧ್ಯಾ ನಗರ ಬಡಾವಣೆಯು ಹಿಂದೂಪರ ಸಂಘಟನೆಯ ಕಾರ್ಯಕರ್ತರೇ ಸೇರಿ ನಿರ್ಮಾಣ ಮಾಡಿರುವ ಬಡಾವಣೆಯಾಗಿದೆ. ಇದು ಸುಮಾರು 12 ಎಕರೆಯಷ್ಟು ಪ್ರದೇಶದಲ್ಲಿ ವ್ಯಾಪಿಸಿದೆ.
ಧಾರವಾಡ, ಜನವರಿ 20: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಜನವರಿ 22ರಂದು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಅದಕ್ಕಿಂತ ಒಂದು ದಿನ ಮೊದಲೇ ಧಾರವಾಡದಲ್ಲಿ (Dharawad) ಶ್ರೀರಾಮನ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದೆ. ಸಿಮೆಂಟ್ನಲ್ಲಿ ನಿರ್ಮಿಸಿರುವ ಶ್ರೀರಾಮನ ಪ್ರತಿಮೆ 21 ಅಡಿ ಎತ್ತರವಿದೆ. ಇದು ಧಾರವಾಡ-ನವಲಗುಂದ ರಸ್ತೆಯ ಅಯೋಧ್ಯಾ ನಗರದಲ್ಲಿ ನಿರ್ಮಾಣವಾಗಿದೆ.
ಅಯೋಧ್ಯಾ ನಗರ ಬಡಾವಣೆಯ ಪ್ರವೇಶ ದ್ವಾರದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಅಯೋಧ್ಯಾ ನಗರ ಬಡಾವಣೆಯು ಹಿಂದೂಪರ ಸಂಘಟನೆಯ ಕಾರ್ಯಕರ್ತರೇ ಸೇರಿ ನಿರ್ಮಾಣ ಮಾಡಿರುವ ಬಡಾವಣೆಯಾಗಿದೆ. ಇದು ಸುಮಾರು 12 ಎಕರೆಯಷ್ಟು ಪ್ರದೇಶದಲ್ಲಿ ವ್ಯಾಪಿಸಿದೆ. ಇದೀಗ ತಾವು ನಿರ್ಮಿಸಿರುವ ಬಡಾವಣೆಯನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಶ್ರೀರಾಮನಿಗೆ ಸಮರ್ಪಿಸಿದ್ದಾರೆ.
ಬಡಾವಣೆ ವರ್ಷದ ಹಿಂದೆಯೇ ನಿರ್ಮಾಣವಾಗಿತ್ತು. ಆದರೆ ರಾಮ ಮಂದಿರ ಉದ್ಘಾಟನೆ ಮುಹೂರ್ತಕ್ಕಾಗಿ ಕಾರ್ಯಕರ್ತರು ಕಾಯುತ್ತಿದ್ದರು. ರಾಮ ಮಂದಿರ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದ ಹಿನ್ನೆಲೆ ಈಗ ಬಡಾವಣೆ ಹಾಗೂ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ
ಜನವರಿ 21ರ ಸಂಜೆ 6 ಗಂಟೆಗೆ ರಾಮನ ಪ್ರತಿಮೆ ಅನಾವರಣಗೊಳ್ಳಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಪ್ರತಿಮೆಯ ಕೆಳಭಾಗದಲ್ಲಿ ‘I LOVE AYODHYA’ ಎಂಬ ಸೆಲ್ಫಿ ಸ್ಪಾಟ್ ನಿರ್ಮಾಣ ಮಾಡಲಾಗಿದೆ. ಮೂರ್ತಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸೋಮವಾರದಿಂದ ಪ್ರತಿಮೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ