ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನ್ಯಾಕ್ನಿಂದ ‘ಎ’ ಶ್ರೇಣಿ ಮಾನ್ಯತೆ; ಕುಣಿದು ಕುಪ್ಪಳಿಸಿದ ಕುಲಸಚಿವ ಮತ್ತು ವಿದ್ಯಾರ್ಥಿಗಳು!
ವಿದ್ಯಾರ್ಥಿಗಳು ಮತ್ತು ವಿವಿಯ ಕುಲಸಚಿವ ಯಶಪಾಲ್ ಕ್ಷೀರಸಾಗರ ಅವರು ತಮ್ಮ ಹರ್ಷವನ್ನು ಕುಣಿದು ಕುಪ್ಪಳಿಸುವ ಮೂಲಕ ವ್ಯಕ್ತಪಡಿಸಿದರು.
ಧಾರವಾಡ: ರಾಜ್ಯದ ಪ್ರತಿಷ್ಠಿತ ಮತ್ತು ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ (KUD) ನ್ಯಾಶನಲ್ ಅಸೆಸ್ಮೆಂಟ್ ಮತ್ತು ಅಕ್ರೆಡಿಶನ್ ಕೌನ್ಸಿಲ್ (NAAC) ನಿಂದ ಎ ಶ್ರೇಣಿಯ ಮಾನ್ಯತೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ವಿವಿಯ ಸಭಾಂಗಣದಲ್ಲಿ ಒಂದು ಸಂತೋಷ ಕೂಟವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ವಿವಿಯ ಕುಲಸಚಿವ ಯಶಪಾಲ್ ಕ್ಷೀರಸಾಗರ (Yashpal Ksheerasagar) ಅವರು ತಮ್ಮ ಹರ್ಷವನ್ನು ಕುಣಿದು ಕುಪ್ಪಳಿಸುವ ಮೂಲಕ ವ್ಯಕ್ತಪಡಿಸಿದರು. ಅವರೆಲ್ಲ ವಿಶ್ವವಿದ್ಯಾಲಯದ ಉಪಕುಲಪತಿಗಳ ಸಮ್ಮುಖದಲ್ಲೇ ಡ್ಯಾನ್ಸ್ ಮಾಡಿದರೆನ್ನುವುದು ವಿಶೇಷ.