ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಫ್ರಿಜ್ ಖರೀದಿಸಿದ ಶಿಗ್ಗಾಂವಿಯ ಬುದ್ಧಿವಂತ ಗೃಹಿಣಿ!

ಅರುಣ್​ ಕುಮಾರ್​ ಬೆಳ್ಳಿ

Updated on: Apr 09, 2024 | 5:39 PM

ಹಾವೇರಿ ಜಿಲ್ಲೆಯ ಶಿಗ್ಗಾಂವಿ ನಿವಾಸಿಯಾಗಿರುವ ಲತಾ ಹೆಸರಿನ ಗೃಹಿಣಿ ಸರ್ಕಾರ ನೀಡಿದ ಹಣವನ್ನು ಸದ್ವಿನಿಯೋಗ ಮಾಡಿಕೊಂಡು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಲತಾ ಅವರು ಹಣವನ್ನು ಕೂಡಿಟ್ಟು ಒಂದು ಫ್ರಿಜ್ ಖರೀದಿಸಿದ್ದಾರೆ! ದೃಶ್ಯಗಳಲ್ಲಿ ಕಾಣುತ್ತಿರುವ ರೆಫ್ರಿಜರೇಟರ್ ಗೆ ಅವರು ₹ 17,500 ಕೊಟ್ಟಿದ್ದಾರಂತೆ.

ಹಾವೇರಿ: ಈ ವಿಡಿಯೋ ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮತ್ತು ಕಾಂಗ್ರೆಸ್ ಸರ್ಕಾರದ ಎಲ್ಲ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರು ಖುಷಿಪಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಅಡಿ ಗೃಹಿಣಿಯರಿಗೆ ಪ್ರತಿ ತಿಂಗಳು ಎರಡೆರಡು ಸಾವಿರ ರೂಪಾಯಿ ಕೊಡುತ್ತಿದೆ, ಹೌದು ತಾನೇ? ಜಿಲ್ಲೆಯ ಶಿಗ್ಗಾಂವಿ ನಿವಾಸಿಯಾಗಿರುವ ಲತಾ (Latha) ಹೆಸರಿನ ಗೃಹಿಣಿ ಸರ್ಕಾರ ನೀಡಿದ ಹಣವನ್ನು ಸದ್ವಿನಿಯೋಗ ಮಾಡಿಕೊಂಡು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಲತಾ ಅವರು ಹಣವನ್ನು ಕೂಡಿಟ್ಟು ಒಂದು ಫ್ರಿಜ್ ಖರೀದಿಸಿದ್ದಾರೆ! ದೃಶ್ಯಗಳಲ್ಲಿ ಕಾಣುತ್ತಿರುವ ರೆಫ್ರಿಜರೇಟರ್ ಗೆ ಅವರು ₹ 17,500 ಕೊಟ್ಟಿದ್ದಾರಂತೆ. ಅದು ಯುಗಾದಿ ಹಬ್ಬದ ದಿನವೇ ಡೆಲಿವರಿಯಾಗಿದ್ದು ಲತಾ ಕುಟುಂಬದವನ್ನು ಮತ್ತಷ್ಟು ಸಂತಸಪಡಿಸಿದೆ. ಮನೆಯವರು ಒಬ್ಬೊಬ್ಬರಾಗಿ ಫ್ರಿಜ್ ಗೆ ಪೂಜೆ ಮಾಡುತ್ತಿರುವುದು, ಹೂಹಾರ ಹಾಕುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಮ್ಮ ತೆರಿಗೆಯಲ್ಲಿ ನಮ್ಮ ಹಕ್ಕು ಸಿಕ್ಕರೆ ಗೃಹಲಕ್ಷ್ಮಿ ಯೋಜನೆ ಸಹಾಯಧನ ರೂ. 4,000ಕ್ಕೆ ಹೆಚ್ಚಿಸಲು ಅಭ್ಯಂತರವಿರಲ್ಲ: ಡಿಕೆ ಸುರೇಶ್

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.